ನವಲಗುಂದ: ಪ್ರತಿ ವರ್ಷ ಮಾರ್ಚ್ನಿಂದ ಏಪ್ರಿಲ್ ತನಕ ಒಂದು ತಿಂಗಳ ಕಾಲ ನಡೆಯುತ್ತಿರುವ ತಾಲ್ಲೂಕಿನ ಯಮನೂರು ಗ್ರಾಮದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಜಾತ್ರೆಗೆ ಗುರುವಾರ, ಶುಕ್ರವಾರ ಹಾಗೂ ಭಾನುವಾರ ಭಕ್ತರ ದಂಡು ಹರಿದು ಬರುತ್ತಿದೆ.

ಜಾತ್ರೆ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರು ಬಂದು ವಾರಗಟ್ಟಲೆ ಇಲ್ಲಿಯೇ ಇದ್ದು ಜಾತ್ರೆ ಮಾಡುತ್ತಾರೆ.

ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಭಕ್ತರು ವಾಹನಗಳ ಮೂಲಕ ಬಂದು ಒಂದೇ ದಿನದಲ್ಲಿ ಜಾತ್ರೆ ಮುಗಿಸಿ ಹೋಗುತ್ತಿದ್ಧಾರೆ. ಕಳೆದ ಕೆಲವು ವರ್ಷಗಳಿಂದ ಗುರುವಾರ, ಶುಕ್ರವಾರ ಹಾಗೂ ಭಾನುವಾರ ದಿನ ರಾಜಾ ಭಾಗಸವಾರ ಊರ್ಫ್ ಚಾಂಗದೇವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ವರ್ಷ ಪೂರ್ತಿ ಜಾತ್ರೆಯ ವಾತಾವರಣ ಇಲ್ಲಿರುತ್ತದೆ.

ಈ ಹಿಂದೆ ಜಾತ್ರೆಯಲ್ಲಿ ಕೃಷಿ ಪರಿಕರಗಳಾದ ರಂಟಿ, ನೇಗಿಲು ಸೇರಿದಂತೆ ಮನೆ ಬಾಗಿಲುಗಳ ಚೌಕಟ್ ಹಾಗೂ ಬಿದಿರು, ಏಣಿ, ಚಾಪೆಯಂತಹ ವಸ್ತುಗಳು ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ, ಇವುಗಳ ಮಾರಾಟ ತುಸು ಕಡಿಮೆಯಾಗಿದೆ. ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ಪೂರೈಸುತ್ತಿರುವುದರಿಂದ ಕೃಷಿ ಉಪಕರಣಗಳ ಬೇಡಿಕೆಯೂ ಕಡಿಮೆಯಾಗಿದೆ.

ಜಾತ್ರೆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಂತರು ಇಲ್ಲಿರುವ ಬೆಣ್ಣೆಹಳ್ಳದಿಂದ ನೀರನ್ನು ತಂದು ಚಾಂಗದೇವರ ದೇವಸ್ಥಾನದಲ್ಲಿ ದೀಪ ಹಚ್ಚುವ ಪದ್ಧತಿ ಮುಂದುವರೆದಿದೆ. ಜಾತ್ರೆಯ ಮೊದಲ ದಿನವಾದ ಗಂಧಾಭಿಷೇಕದ ದಿನ ಇದೇ ಬೆಣ್ಣಿಹಳ್ಳದ ನೀರಿನಿಂದ ದೀಪ ಬೆಳಗಿಸುವುದು ವಾಡಿಕೆ.

ಭಕ್ತರು ಜಟಕಾ ಬಂಡಿಯಲ್ಲಿ ಜಾತ್ರೆಗೆ ಬರುತ್ತಿರುವುದು ಇಲ್ಲಿನ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.