ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ಮೊಹರಂ ಆಚರಣೆ, ಪಂಜಾಗಳ ಮೆರವಣಿಗೆ

Last Updated 10 ಆಗಸ್ಟ್ 2022, 3:49 IST
ಅಕ್ಷರ ಗಾತ್ರ

ನವಲಗುಂದ: ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮೊಹರಂ ಆಚರಿಸಲಾಯಿತು. ಉತ್ಸವದಲ್ಲಿ ಧರ್ಮವ ಭೇದವಿಲ್ಲದೆ ಜನರು ಪಾಲ್ಗೊಂಡರು.

ನಗರದ ಕಳ್ಳಿಮಠ ಓಣಿ, ಜಟಕಾ ಓಣಿ, ನಾಶಿಪುಡಿ ಓಣಿ, ಜಮಖಾನ ಓಣಿ, ಗುಡ್ಡದಕೇರಿ ಓಣಿ, ಹೊರಗಿನ ಟಕ್ಕೆ ಮುಂತಾದ ಕಡೆ ದರ್ಗಾಗಳಲ್ಲಿ ಒಂದು ವಾರದಿಂದ ಪ್ರತಿಷ್ಠಾಪಿಸಿದ ಪಂಜಾಗಳು ಮೆರವಣಿಗೆ ಮೂಲಕ ಪಟ್ಟಣದ ಚವಡಿ ಬಯಲಿನಲ್ಲಿ ಸೇರಿದವು. ನಗರದ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ಸೇರಿ ಮೊಹರಂ ಪಂಜಾಗಳ ಮೆರವಣಿಗೆ ಸವಾರಿಯನ್ನು ಕಣ್ತುಂಬಿಕೊಂಡರು.

ಮಂಗಳವಾರ ಬೆಳಿಗ್ಗೆಯಿಂದಲೇ ದರ್ಗಾಗಳಲ್ಲಿ ಅಲಾಯಿ, ಪಂಜಾ ಡೋಲಿಗಳನ್ನು ಎಬ್ಬಿಸುವ ಸಾಂಪ್ರದಾಯಿಕ ಆಚರಣೆ ನಡೆದವು. ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ನೇತೃತ್ವದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಹುಲಿ ವೇಷಧಾರಿಗಳು, ಕುದುರೆ ಕುಣಿತ ತಂಡ ಮೊಹರಂ ಪಂಜಾ ದೇವರುಗಳ ಮುಂದೆ ಕುಣಿದು ಹರಕೆ ತೀರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT