ಗುರುವಾರ , ಅಕ್ಟೋಬರ್ 29, 2020
20 °C

ಧಾರವಾಡ: ಸತತ ಮಳೆಗೆ ಉಕ್ಕಿ ಹರಿಯುತ್ತಿದೆ 'ನೀರಸಾಗರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತತ ಮಳೆಗೆ ಕೆರೆ ಕೋಡಿ ಹರಿಯುತ್ತಿರುವುದು

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಸುರಿದ ಸತತ ಮಳೆಗೆ ಬಹಳಷ್ಟು ಕೆರೆಗಳು ಕೋಡಿ ಹರಿದಿವೆ.

ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ನೀರು ಪೂರೈಸುವ ಕಲಘಟಗಿ ತಾಲ್ಲೂಕಿನ ನೀರಸಾಗರ ಉಕ್ಕಿ ಹರಿದಿದೆ. 38 ಅಡಿ ಎತ್ತರದ ಕೆರೆ ಬಹಳ ವರ್ಷಗಳ ನಂತರ ಸತತ ಎರಡನೇ ಬಾರಿ ಭರ್ತಿಯಾಗಿದೆ. ಅಳನಾವರ ತಾಲ್ಲೂಕಿನ ಹೂಲಿ ಕೆರೆಯೂ ಭರ್ತಿಯಾಗಿದೆ.

ಕಳೆದಬಾರಿ ಸುರಿದ ಭಾರಿ ಮಳೆಗೆ ತುಂಬಿದ್ದ ಕೆರೆ ಒಡೆಯುವ ಭೀತಿ ಸೃಷ್ಟಿಸಿತ್ತು. ಈ ಬಾರಿಯೂ ಕೆರೆ ತುಂಬಿ ಉಕ್ಕಿ ಹರಿಯುತ್ತಿದೆ.  ಸತತ ಮಳೆಗೆ ಬಹಳಷ್ಟು ಕೆರೆಗಳು ಕೊಡಿಹರಿಯುತ್ತಿವೆ.


ನೀರಸಾಗರ ಜಲಾಶಯ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು