ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿತರಕರಿಗೆ ಬೇಕು ಸೌಲಭ್ಯಗಳ ಭದ್ರತೆ’

ವಿಶ್ವ ಪತ್ರಿಕಾ ವಿತರಕರ ದಿನ: ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮ
Last Updated 5 ಸೆಪ್ಟೆಂಬರ್ 2022, 5:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಓದುಗರ ಮನೆ ಬಾಗಿಲಿಗೆ ದಿನಪತ್ರಿಕೆ ತಲುಪಿಸುವ ವಿತರಕರು, ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಾರೆ. ಇದೇ ವೃತ್ತಿಯನ್ನು ನಂಬಿಕೊಂಡಿರುವ ವಿತರಕರ ಬದುಕಿಗೆ ಸೌಲಭ್ಯಗಳ ಭದ್ರತೆ ಬೇಕಿದೆ’ ಎಂದು ಹುಬ್ಬಳ್ಳಿಯ ವೃತ್ತ ಪತ್ರಿಕೆಗಳ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್. ಹಿರೇಮಠ ಹೇಳಿದರು.

ನಗರದ ಕೊಪ್ಪಿಕರ ರಸ್ತೆಯಲ್ಲಿ ಭಾನುವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಕ್‌ ಕತ್ತರಿಸಿದ ವಿತರಕರು, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಎಲ್ಲರಿಗೂ ಹೂ ನೀಡಿ ಸ್ವಾಗತಿಸಲಾಯಿತು. ಗೋಕುಲ ರಸ್ತೆಯಲ್ಲಿ ಪತ್ರಿಕೆ ವಿತರಿಸುವ ಹುಡುಗರು ಕೇಕ್ ಕತ್ತರಿಸಿದರೆ, ವಿದ್ಯಾನಗರದಲ್ಲಿ ಸಿಹಿ ವಿತರಿಸಲಾಯಿತು.

ಸಂಘದ ಕಾರ್ಯದರ್ಶಿ ಆರ್‌.ಸಿ. ಜಿತೂರಿ, ಶಿವಾಜಿ ತಡಸ, ಮನೋಹರ ಪರ್ವತಿ, ಸತ್ಯಬೋಧ ಕಟ್ಟಿ, ಪ್ರಸನ್ನ ಭಾಂಡಗೆ, ಮುಷ್ತಾಕ್ ಅಹ್ಮದ ಬೇಪಾರಿ, ಗಿರಿಧರ ದೀವಟೆ, ವಿಠ್ಠಲ ಲಮಾಣಿ, ಅರುಣ ತೋಡಕರ, ಶರಣಯ್ಯ ಹಿರೇಮಠ, ಮಂಜು, ಆನಂದ, ಸಿದ್ದಪ್ಪ, ಪ್ರವೀಣ ಇದ್ದರು.

ಸನ್ಮಾನ

ಕಲಘಟಗಿ: ಪಟ್ಟಣದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತ ಬಳಗ ಹಾಗೂ ಭಾರತೀಯ ಕಿಸಾನ್ ಸಂಘದ ಆಶ್ರಯದಲ್ಲಿ ಪತ್ರಿಕಾ ವಿತರಕ ಈರಣ್ಣ ಅಂಗಡಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪುರದನಗೌ‍ಡರ, ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂತ ಅಧ್ಯಕ್ಷ ವಿವೇಕ ಮೊರೆ, ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪ ಮಾಧನ
ಭಾವಿ, ಸಿದ್ಧಯ್ಯ ಕಟ್ನೂರಮಠ, ಗುರುನಾಥಗೌಡ ಬಸನಗೌಡರ, ವೀರಣ್ಣ ಕುಬಸದ, ಪ್ರಕಾಶ ಲಮಾಣಿ, ಪರಶುರಾಮ ಹುಲಿಹೊಂಡ, ಉದಯಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT