ಭಾನುವಾರ, ಮಾರ್ಚ್ 29, 2020
19 °C
108 ಆಂಬುಲೆನ್ಸ್‌ ಸಿಬ್ಬಂದಿಯ ಪರದಾಟ

ಜಿಲ್ಲೆಗೆ ಪೂರೈಕೆಯಾಗದ ಸುರಕ್ಷಾ ಸಾಮಗ್ರಿ: ಆರೋಗ್ಯ ರಕ್ಷಕರಿಗೆ ಸುರಕ್ಷೆಯಿಲ್ಲ!

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸುರಕ್ಷಾ ಸಾಮಗ್ರಿಗಳ ಪೂರೈಕೆಯ ಕೊರತೆಯಿಂದಾಗಿ ಜಿಲ್ಲೆಯ 108 ಆಂಬುಲೆನ್ಸ್‌ ಸಿಬ್ಬಂದಿಯ ರಕ್ಷಣೆಗೆ ಸುರಕ್ಷತೆಯೇ ಇಲ್ಲದಂತಾಗಿದೆ.

ಈಗ ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಎಚ್ಚರಿಕೆ ವಹಿಸಲು ಸುರಕ್ಷಾ ಕವಚಗಳನ್ನು ಹಾಕಿಕೊಳ್ಳುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಜನರ ಜೀವ ರಕ್ಷಣೆಗಾಗಿ ಹಗಲಿರುವ ಕೆಲಸ ಮಾಡುತ್ತಿರುವ ಹಾಗೂ ಸದಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸದಲ್ಲಿ ನಿರತರಾದ 108 ಸಿಬ್ಬಂದಿಗೆ ಮಾಸ್ಕ್‌, ಹ್ಯಾಂಡ್‌ ವಾಷ್‌, ಡೆಟಾಲ್‌, ರೂಮ್‌ ಫ್ರೆಷನರ್‌, ವೈಯಕ್ತಿಕ ರಕ್ಷಣಾ ಸಲಕರಣೆಗಳು ಅಗತ್ಯವಾಗಿವೆ. ಇವು ಲಭಿಸದ ಕಾರಣ ಜಿಲ್ಲೆಯ ಸಿಬ್ಬಂದಿ ಸೋಂಕು ತಗುಲುವ ಭೀತಿಯ ನಡುವೆಯೇ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 23 ಅಂಬುಲೆನ್ಸ್‌ಗಳಿದ್ದು, 85 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸುರಕ್ಷಾ ಕವಚಗಳು ಇಲ್ಲದ ಕಾರಣ ಸಿಬ್ಬಂದಿ ಕಿಮ್ಸ್‌ ಸೇರಿದಂತೆ ಇತರ ಆಸ್ಪತ್ರೆಗಳಿಗೆ ಹೋದಾಗ ರೋಗಿಯನ್ನು ಇಳಿಸುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ನೋವು ತೋಡಿಕೊಂಡ 108 ಅಂಬುಲೆನ್ಸ್‌ ಸಿಬ್ಬಂದಿಯೊಬ್ಬರು ‘ಆಸ್ಪತ್ರೆ ಹಾಗೂ ರೋಗಿಗಳ ಜೊತೆ ಹೆಚ್ಚು ಓಡಾಡುವುದರಿಂದ ನಮ್ಮ ಸುರಕ್ಷತೆ ಕೂಡ ಮುಖ್ಯವಾಗಿದೆ. ಆದ್ದರಿಂದ ಗುಣಮಟ್ಟದ ಎನ್‌–95 ಮಾಸ್ಕ್‌ ವಿತರಿಸಬೇಕು. ಕೊರೊನೊ ಪೀಡಿತ ರೋಗಿಗಳ ಆರೈಕೆಗೆ ಕೊಡುತ್ತಿರುವಷ್ಟೇ ಮಹತ್ವ ನಮಗೂ ಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.

ಅಂಬುಲೆನ್ಸ್‌ ಚಾಲಕರೊಬ್ಬರು ಮಾತನಾಡಿ ‘ಮಾಸ್ಕ್‌, ಕೈಗವುಸು ಅತ್ಯಗತ್ಯವಾಗಿ ಬೇಕಾಗಿವೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಮ್ಮ ಸುರಕ್ಷತೆಯೂ ಮುಖ್ಯ. ಆಂಬುಲೆನ್ಸ್‌ನಲ್ಲಿ ಸಾನಿಟೈಸರ್‌ ಕಡ್ಡಾಯವಾಗಿ ಇರಲೇಬೇಕು ಎನ್ನುವ ನಿಯಮವಿದೆ. ಅದು ಕೂಡ ಪಾಲನೆಯಾಗುತ್ತಿಲ್ಲ. ಈಗ ಯಾವ ವ್ಯಕ್ತಿಗೆ ಸೋಂಕು ಇದೆ ಎಂಬುದೇ ಗೊತ್ತಾಗದ ಕಾರಣ ಕೆಲಸ ಮಾಡಲು ಆತಂಕವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು