ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ನಗರಗಳ ಶಿಸ್ತುಬದ್ಧ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಟಿಬದ್ಧ ನಿರ್ಧಾರ ಕೈಗೊಳ್ಳಬೇಕು. ಸುಸಜ್ಜಿತ ನಗರಗಳನ್ನು ನಿರ್ಮಿಸಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ವಿಮಾನ ನಿಲ್ದಾಣ ಸಮೀಪದ ಮೈದಾನದಲ್ಲಿ ಕ್ರೆಡೈ ಸಂಸ್ಥೆ ಹಮ್ಮಿಕೊಂಡಿರುವ ‘ರಿಕಾನ್ ಎಕ್ಸ್ ಪೋ’ ಅನ್ನು ಶುಕ್ರವಾರ ಉದ್ಘಾಟಿಸಿ, ಮಾತನಾಡಿದರು.

‘ಬೆಂಗಳೂರಿನಾಚೆಗಿನ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ನಾನು ಸಚಿವನಾಗಿದ್ದಾಗ ನೆರವು ಒದಗಿಸಿದ್ದೆ. ಉತ್ತರ ಕರ್ನಾಟಕ ಭಾಗದ ನಗರಗಳಲ್ಲಿ ವಿಶೇಷ ಹೂಡಿಕೆಗೆ ಯೋಜನೆ ರೂಪಿಸಿದ್ದೆ. ಈಗಿನ ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದ್ದು, ಅಧಿಸೂಚನೆ ಸಹ ಆಗಿದೆ. ಶೀಘ್ರ ಅನುಷ್ಠಾನಗೊಳಿಸಬೇಕು’ ಎಂದರು.

‘ಎಫ್ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಸ್ಥಾಪನೆಗೆ ಮಮ್ಮಿಗಟ್ಟಿಯಲ್ಲಿ 200 ಎಕರೆ ಜಾಗ ಮೀಸಲಿಡಲಾಗಿತ್ತು. ಆಗ 20ಕ್ಕೂ ಹೆಚ್ಚು ಉದ್ಯಮಿಗಳು ಹೂಡಿಕೆಗೆ ಸಹಿ ಮಾಡಿದ್ದರು. ಆದರೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧ ಮಂಡಳಿ) ಏಕಾಏಕಿ ಭೂ ದರ ಹೆಚ್ಚಿಸಿತು. ಮೊದಲಿದ್ದ ದರವನ್ನೇ ನಿಗದಿ ಮಾಡಿದ್ದರೆ, ಈ ಭಾಗದ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಹೇಳಿದರು.

‘ಬೆಂಗಳೂರಿನ ದರವನ್ನು ಇಲ್ಲಿ ನಿಗದಿ ಮಾಡಬಾರದು. ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಿ, ಈ ಭಾಗದ ಅಭಿವೃದ್ಧಿ ಸಾಧ್ಯವಾಗಬೇಕಾದರೆ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ. ಡೆವಲಪರ್ಸ್ ಸಹ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ನನ್ನೊಂದಿಗೆ ಚರ್ಚಿಸಿ, ಪರಿಹರಿಸಲು ಯತ್ನಿಸುವೆ’ ಎಂದು ಭರವಸೆ ನೀಡಿದರು.

ಕ್ರೆಡೈ ಹುಬ್ಬಳ್ಳಿ–ಧಾರವಾಡ ಘಟಕದ ಅಧ್ಯಕ್ಷ ಗುರುರಾಜ ಎಂ. ಅಣ್ಣಿಗೇರಿ ಮಾತನಾಡಿ, ‘ರಿಕಾನ್ ಎಕ್ಸ್ ಪೋ ಕ್ರೆಡೈನ ಕನಸು. ಈಗ ನನಸಾಗಿದೆ. ಭೂಮಿ, ಕಟ್ಟಡ ನಿರ್ಮಾಣ ಹಾಗೂ ಒಳಾಂಗಣ ವಿನ್ಯಾಸಕ್ಕೆ ಸಂಬಂಧಿಸಿದ ಒಟ್ಟು 150 ಮಳಿಗೆಗಳು ಇಲ್ಲಿವೆ. ಒಂದು ಸೂರಿನಡಿ ಎಲ್ಲ ಸೌಲಭ್ಯ ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಭೂಮಿ ಖರೀದಿಸುವಾಗ ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಕ್ರೆಡೈ ಚೇರ್ಮನ್ ಸಂಜಯ್ ಪಿ.ಕೊಠಾರಿ, ಎಕ್ಸ್ಪೋ ಸಂಚಾಲಕ ಇಸ್ಮಾಯಿಲ್ ಸಾಂಸಿ, ಚುನಾಯಿತ ಅಧ್ಯಕ್ಷ ಅಮೃತ್ ಮೆಹರ್ವಾಡೆ, ಕಾರ್ಯದರ್ಶಿ ಸತೀಶ ಮುನವಳ್ಳಿ, ಪ್ರದೀಪ್ ಇದ್ದರು.

ಭೂಮಿ ಖರೀದಿ, ಇಟ್ಟಿಗೆಯಿಂದ ಒಳಾಂಗಣ ವಿನ್ಯಾಸದವರೆಗೆ ಕಟ್ಟಡಕ್ಕೆ ಬೇಕಾದ ಸಾಮಗ್ರಿಗಳು, ಬ್ಯಾಂಕ್ಗಳ ಮಳಿಗೆಗಳಲ್ಲಿ ಜನರಿಗೆ ಅಗತ್ಯ ಮಾಹಿತಿ ನೀಡಲಾಯಿತು.

ಯೋಜನಾಬದ್ಧ ಕ್ರಮವಾಗಲಿ’

‘ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು ರಾಜ್ಯ ಸರ್ಕಾರ ಅವುಗಳನ್ನು ಸಕ್ರಮ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ‘ಬಿ’ ಖಾತಾ ನಿವೇಶನ ಹಾಗೂ ಕಟ್ಟಡಗಳಿಗೆ ‘ಎ’ ಖಾತೆ ನೀಡಲು ಮುಂದಾಗಿದೆ. ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿದರೆ ಬಡವರಿಗೆ ಅನ್ಯಾಯವಾಗಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ‘ಕಾನೂನುಬದ್ದವಾಗಿ ಉದ್ಯಮ ನಡೆಸುವವರಿಗೆ ಹಲವಾರು ತೊಂದರೆ ಎದುರಾಗುತ್ತದೆ. ಕಾನೂನು ಮೀರಿದವರಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ. ಬೆಂಗಳೂರು ಸೇರಿದಂತೆ ಯಾವುದೇ ನಗರದಲ್ಲಿ ಸಂಪೂರ್ಣವಾಗಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಯೋಜನಾಬದ್ಧ ಕ್ರಮ ವಹಿಸಿದರೆ ಜನರಿಗೆ ನೆಮ್ಮದಿ ಸಿಗುತ್ತದೆ’ ಎಂದರು.

‘ಮಾಸ್ಟರ್ಪ್ಲಾನ್ ಶೀಘ್ರ ಸಲ್ಲಿಕೆ’

‘ಅಭಿವೃದ್ಧಿಯಲ್ಲಿ ಹುಬ್ಬಳ್ಳಿ ಹಿಂದೆ ಉಳಿದಿದೆ. ವ್ಯವಸ್ಥಿತ ನಗರ ನಿರ್ಮಾಣದ ಬಗ್ಗೆ ಹುಡಾ ಅಧಿಕಾರಿಗಳೊಂದಿಗೆ ಗಂಭೀರ ಚಿಂತನೆ ನಡೆಸಿ ಮಾಸ್ಟರ್ ಪ್ಲಾನ್ ರಚಿಸಲಾಗಿದೆ. ಇದನ್ನು ಶೀಘ್ರದಲ್ಲೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಕೀರ್ ಸನದಿ ಹೇಳಿದರು. ‘ಅನಧಿಕೃತ ಬಡಾವಣೆಗಳನ್ನು ಈ ಹಿಂದೆ ತೆರವು ಮಾಡಲಾಗುತ್ತಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಬಡಾವಣೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಕಲ್ಪಿಸುತ್ತಿಲ್ಲ. ಅಕ್ರಮ ಬಡಾವಣೆಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ. ಸಂಪೂರ್ಣ ನಿಯಂತ್ರಣ ಆಗಬೇಕಿದೆ’ ಎಂದರು. ‘ಕಡಿಮೆ ದರಕ್ಕೆ ಸಿಗುವುದೆಂದು ಜನರು ಸರಿಯಾಗಿ ಪರಿಶೀಲಿಸದೆ ಜಾಗ ಖರೀದಿಸಬಾರದು. ಅಕ್ರಮ ಬಡಾವಣೆಗಳಿಗೆ ರಾಜಕಾರಣಿಗಳೇ ನೆರವು ನೀಡುತ್ತಾರೆ ನಂತರ ಬೇರೊಬ್ಬರ ಮೇಲೆ ಆರೋಪ ಮಾಡುತ್ತಾರೆ. ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಎಲ್ಲರೂ ಸೇರಿ ತಡೆಯೋಣ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.