ಮಂಗಳವಾರ, ಅಕ್ಟೋಬರ್ 22, 2019
25 °C

ಕಲಾವಿದ ಎಂ.ಸಿ.ಚೆಟ್ಟಿ ನಿಧನ

Published:
Updated:

ಹುಬ್ಬಳ್ಳಿ: ನಗರದ ಹಿರಿಯ ಭಾವಚಿತ್ರ ಕಲಾವಿದ ಎಂ.ಸಿ. ಚೆಟ್ಟಿ (62)ಗುರುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ ನಗರದ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.

ಧಾರವಾಡ, ಗದಗ, ವಿಜಯಪುರ, ಬೆಳಗಾವಿ, ಬೆಂಗಳೂರು, ಗೋವಾದಲ್ಲಿ ಅವರು ಚಿತ್ರಕಲಾ ಪ್ರದರ್ಶನ ಮಾಡಿದ್ದರು. 1982 ಮತ್ತು 1986ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಹುಬ್ಬಳ್ಳಿಯ ಜಾಗೃತಿ ಕಲಾವಿದರು ಸಂಸ್ಥೆಯ ಸಂಸ್ಥಾಪಕ
ಕಾರ್ಯದರ್ಶಿಯಾಗಿದ್ದರು.

1994 ಮತ್ತು 1997ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಲಾಮೇಳದಲ್ಲಿ ಪಾಲ್ಗೊಂಡಿದ್ದರು. ಹಲವಾರು ಕಲಾಕೃತಿಗಳು ಲಲಿತಕಲಾ ಅಕಾಡೆಮಿ ಸಂಗ್ರಹದಲ್ಲಿವೆ. ಅಂತ್ಯಕ್ರಿಯೆ ಶುಕ್ರವಾರ (ಸೆ. 20) ಬೆಳಿಗ್ಗೆ ನಡೆಯಲಿದೆ. ಸಂಪರ್ಕಕ್ಕೆ 95387 17082.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)