ರಾಜ್ಯಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ 12ಕ್ಕೆ

7

ರಾಜ್ಯಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ 12ಕ್ಕೆ

Published:
Updated:

ಹುಬ್ಬಳ್ಳಿ: ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆ, ಧಾರವಾಡ ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಅ. 12 ಮತ್ತು 13ರಂದು ಇಲ್ಲಿ ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ನವೆಂಬರ್‌ 21ರಿಂದ 23ರ ವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿ ನಡೆಯಲಿದ್ದು, ಆ ಟೂರ್ನಿಗೆ ಕರ್ನಾಟಕ ತಂಡ ಆಯ್ಕೆ ಮಾಡಲು ಇದು ಟ್ರಯಲ್ಸ್‌ ಕೂಡ ಆಗಿದೆ.

‘ಬಾಲಕರ, ಬಾಲಕಿಯರ, ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ. 5, 7, 10, 15, 20 ಕಿ.ಮೀ. ವಿಭಾಗದಲ್ಲಿ ಟೈಮ್‌ ಟ್ರಯಲ್ಸ್‌, 15, 20, 30,40 50 ಹಾಗೂ 50 ಕಿ.ಮೀ. ದೂರದ ವಿಭಾಗದಲ್ಲಿ ಮಾಸಡ್‌ ಸ್ಟಾರ್ಟ್‌ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ’ ಎಂದು ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !