ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ₹1.59 ಲಕ್ಷ ವಂಚನೆ

Last Updated 31 ಮೇ 2022, 4:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಇಮ್ತಿಯಾಜ್‌ ಅವರು ಸೋಫಾಸೆಟ್ ಮಾರಾಟ ಮಾಡುವುದಾಗಿ ಒಎಲ್‌ಎಕ್ಸ್‌ನಲ್ಲಿ ನೀಡಿದ್ದ ಜಾಹೀರಾತು ನೋಡಿ, ಅದನ್ನು ಖರೀದಿಸುವುದಾಗಿ ನಂಬಿಸಿದ್ದ ವ್ಯಕ್ತಿ ಅವರಿಂದಲೇ ₹1.59 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಇಮ್ತಿಯಾಜ್‌ ಅವರು ಒಎಲ್‌ಎಕ್ಸ್‌ನಲ್ಲಿ ಸೋಫಾಸೆಟ್‌ ಫೋಟೊ ಅಪ್‌ಲೋಡ್‌ ಮಾಡಿ, ಮೊಬೈಲ್‌ ನಂಬರ್‌ ನೀಡಿದ್ದರು. ಅವರಿಗೆ ಕರೆ ಮಾಡಿದ ವಂಚಕ ₹10 ಸಾವಿರಕ್ಕೆ ಖರೀದಿಸುವುದಾಗಿ ಹೇಳಿ, ಮೊದಲು ತನ್ನ ಖಾತೆಗೆ ₹10 ಸಾವಿರ ಹಾಕಿದರೆ ₹20 ಸಾವಿರ ಮರಳಿಸುತ್ತೇನೆ ಎಂದು ಕ್ಯೂಆರ್‌ ಕೋಡ್‌ ಕಳಹಿಸಿದ್ದಾನೆ. ಅದನ್ನು ನಂಬಿದ ಅವರು ಕ್ಯೂಆರ್‌ ಸ್ಕ್ಯಾನ್‌ ಮಾಡಿ ಪಾಸ್‌ವರ್ಡ್‌ ಹಾಕಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು: ಮೈಸೂರಿನಿಂದ ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹುಬ್ಬಳ್ಳಿಗೆ ಬರುತ್ತಿದ್ದ ಮೈಸೂರಿನ ಪ್ರೇಮಾ ಗೋಕಾಕ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹4.72 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT