ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಯೋಗ ನೇರ ಪ್ರಸಾರ ಇಂದು

Last Updated 20 ಜೂನ್ 2020, 15:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ(ಎಸ್‌ಪಿವೈಎಸ್‌ಎಸ್‌) ಅಂಗಸಂಸ್ಥೆಯಾದ ಯೋಗ ಸ್ಪರ್ಶ ಪ್ರತಿಷ್ಠಾನವು ಆನ್‌ಲೈನ್‌ ಮೂಲಕ ವಿಶ್ವ ಯೋಗ ದಿನ ಆಚರಿಸಲಿದೆ. ವಿಶ್ವದಾದ್ಯಂತ ಇರುವ ತನ್ನ 1200 ಶಾಖೆಗಳಲ್ಲಿ ಭಾನುವಾರ ಬೆಳಿಗ್ಗೆ 7ರಿಂದ 8ರವರೆಗೆ ಆಯಾ ಶಾಖೆಗಳು ಯೋಗ ಶಿಬಿರದ ನೇರ ಪ್ರಸಾರ ಮಾಡಲಿವೆ.

ಆಸಕ್ತರು ಫೇಸ್‌ಬುಕ್‌ ಲಿಂಕ್‌ https://www.facebook.com/SPYSSYOGA ಹಾಗೂ ಯೂ ಟ್ಯೂಬ್‌ ಲಿಂಕ್‌ https://m.youtube.com/results?search_query=spyssyoa ನಲ್ಲಿ ಯೋಗ ನೇರ ಪ್ರಸಾರ ವೀಕ್ಷಿಸಹುದು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಬಳಗನೂರು, ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ ಅವರು ತಿಳಿಸಿದ್ದಾರೆ.

‘ಈ ಮೊದಲು ಜೂಮ್‌ ಆ್ಯಪ್‌ನಲ್ಲಿ ಯೋಗ ಶಿಬಿರದ ಪ್ರಸಾರಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಚೀನಾ ದೇಶದ ತಂತ್ರಾಂಶವನ್ನು ಬಹಿಷ್ಕರಿಸುವ ಭಾಗವಾಗಿ ಆ ನಿರ್ಧಾರದಿಂದ ಹಿಂದೆ ಸರಿದೆವು. ಬದಲಿಗೆ ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ’ ಎಂದು ದಯಾನಂದ ಪ್ರಜಾವಾಣಿಗೆ ತಿಳಿಸಿದರು.

ಇದೇ ರೀತಿ ಜಿಲ್ಲೆಯ ಬೇರೆ ಸಂಘ ಸಂಸ್ಥೆಗಳು, ಯೋಗ ತರಬೇತಿ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಆನ್‌ಲೈನ್‌ ಮೂಲಕ ಜನರಿಗೆ ಯೋಗ ಹೇಳಿಕೊಡಲು ನಿರ್ಧರಿಸಿದ್ದಾರೆ. ಬಸವೇಶ್ವರ ನಗರದ ದೀಪಾಲಿ ಕುಲಕರ್ಣಿ ಅವರು ಯೋಗದ ವಿಡಿಯೊ ಸಿದ್ಧಪಡಿಸಿ, ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಜತೆಗೆ ಯೋಗದ ಮಹತ್ವ ಕುರಿತೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಸೋಂಕಿನಿಂದಾಗಿಈ ಬಾರಿ ಯೋಗ ದಿನ ಕಳೆಗುಂದಿದ್ದು, ಸಾರ್ವಜನಿಕ ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ಶಿಬಿರಗಳಿಗೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಜನರು ಮನೆಗಳಲ್ಲಿಯೇ ಯೋಗಾಭ್ಯಾಸ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT