ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಜೈಲಾನಿ ಸುದರ್ಜಿ

Last Updated 18 ಮಾರ್ಚ್ 2022, 2:41 IST
ಅಕ್ಷರ ಗಾತ್ರ

ಅಳ್ನಾವರ: ‘ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಜೈಲಾನಿ ಸುದರ್ಜಿ ಹೇಳಿದರು.

ಇಲ್ಲಿನ ಅಮೃತ ನಗರ ಬಡಾವಣೆಯ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ದೀಪದಾನ ಹಾಗೂ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಅಧ್ಯಯನ ಮಾಡಲು ಉತ್ಸುಕತೆ ತೋರಬೇಕು’ ಎಂದರು.

ಅನಿಸ್ ಮುಲ್ಲಾ, ಎಸ್‌ಡಿಎಂಸಿ ಅಧ್ಯಕ್ಷ ಶುಕರಅಹ್ಮದ್ ಅಳವಾಡ, ಮಾದರಿ ಉರ್ದು ಪ್ರಾಥಮಿಕ ಶಾಲೆಯ ಅಧ್ಯಕ್ಷ ಅನಿಸ್ ಮುಲ್ಲಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶಕೀಲ ಮುರ್ತುಜಾ, ಉಪಾಧ್ಯಕ್ಷ ಅಸ್ಮಾಖಾನಮ್ ಜಮಾದಾರ, ಮುಸ್ತಫಾ ಕಮಾಲುದ್ದೀನ್, ಮರಾಠಿ ಶಾಲೆಯ ಮುಖ್ಯ ಶಿಕ್ಷಕಿ ಉಜ್ವಲಾ ಮುದೋಳ, ಕಾಶೇನಟ್ಟಿ ಶಾಲೆಯ ಶಿಕ್ಷಕಿ ಮಕಾದಮ್, ಶೌಕತ ಅಲಿ ಜೋಗನಕೊಪ್ಪ, ಬಿ.ಜೆ. ಯಲಿಗಾರ, ಕೌಸರ ಯಾದವಾಡ, ರುಕ್ಸಾನಾ ಬಸ್ಸಾಪೂರ, ರಿಜ್ವಾನ ಮಿರಜಕರ, ಜೋಗನಕೊಪ್ಪ. ಗುಪ್ತ ತಿಗಡಿ, ರುಜ್ವಾಬಖಾನ ಖುರೇಷಿ ಇದ್ದರು.

ಸಿಆರ್‌ಪಿ ಎ.ಎ. ಚಕೋಲಿ, ಮುಖ್ಯ ಶಿಕ್ಷಕಿ ಏಕನಾಥ ಹೊನಗೇಕರ, ವೈ.ವಿ. ಶಿಂಪಿ, ಡಿ.ಎನ್.ಲಲಿತಾ ಅರ್ಫಾನ ಬಳ್ಳೂರ, ಶಬಾನಾ ಮಕಾನದಾರ ಅವರನ್ನು ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT