ಮಾರುಕಟ್ಟೆಯ ಸ್ಟಾಲ್‌ಗಳ ಹರಾಜಿಗೆ ವಿರೋಧ

7

ಮಾರುಕಟ್ಟೆಯ ಸ್ಟಾಲ್‌ಗಳ ಹರಾಜಿಗೆ ವಿರೋಧ

Published:
Updated:

ಹುಬ್ಬಳ್ಳಿ: ಮಾರುಕಟ್ಟೆಯಲ್ಲಿರುವ ಸ್ಟಾಲ್‌ಗಳನ್ನು ಹರಾಜಿನ ಮೂಲಕ ನೀಡಲು ‌ಮುಂದಾಗಿರುವ ಪಾಲಿಕೆ ಕ್ರಮಕ್ಕೆ ಸೂಪರ್‌ ಮಾರ್ಕೆಟ್‌ ಶಾಪ್‌ ಲೀಸ್‌ ಹೋಲ್ಡರ್ಸ್ ಸಂಘ ವಿರೋಧ ವ್ಯಕ್ತಪಡಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ವಿ.ವಿ. ಚಿಕ್ಕಮಠ ‘ಜನತಾ ಬಜಾರ್‌, ಎಂ.ಜಿ. ಮಾರ್ಕೆಟ್‌ ಹೀಗೆ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಸುಮಾರು 45 ವರ್ಷಗಳಿಂದ ಸ್ಟಾಲ್‌ಗಳನ್ನು ನಡೆಸಿಕೊಂಡು ಬಂದಿದ್ದೇವೆ. ಅಲ್ಲಿ ಮೂಲ ಸೌಕರ್ಯಗಳೇ ಇಲ್ಲದಿದ್ದರೂ, ಎಲ್ಲ ನಿರ್ವಹಣೆಯನ್ನು ನಾವೇ ಮಾಡಿಕೊಂಡಿದ್ದೇವೆ. ಆದರೆ, ಈಗ ಪಾಲಿಕೆ ಹರಾಜಿನ ಮೂಲಕ ಸ್ಟಾಲ್‌ಗಳನ್ನು ನೀಡಲು ಮುಂದಾಗಿರುವುದು ಸರಿಯಲ್ಲ’ ಎಂದರು.

‘ವ್ಯಾಪಾರ ಮಾಡುವವರಲ್ಲಿ ಅನೇಕರು ವಿದ್ಯಾವಂತರಿದ್ದಾರೆ. ಆದರೆ, ಪರಂಪರಾಗತವಾಗಿ ಇದೇ ವೃತ್ತಿ ನಡೆಸಿಕೊಂಡು ಬಂದ ಕಾರಣ ನಮ್ಮಲ್ಲಿ ಅನೇಕರು ವ್ಯಾಪಾರ ವೃತ್ತಿಗೆ ಬಂದಿದ್ದಾರೆ. ಹರಾಜಿನ ಮೂಲಕ ಸ್ಟಾಲ್‌ಗಳನ್ನು ನೀಡಿದರೆ, ಈಗ ವ್ಯಾಪಾರ ನಡೆಸುತ್ತಿರುವ ಎಲ್ಲರಿಗೂ ಸ್ಟಾಲ್‌ಗಳು ಸಿಗುವುದು ಖಚಿತವಿಲ್ಲ. ಬೇಕಾದರೆ ವಾರ್ಷಿಕ ಶುಲ್ಕ ಹೆಚ್ಚಿಸಿದರೆ, ಅದನ್ನು ಕಟ್ಟಲು ನಾವು ಸಿದ್ಧರಿದ್ದೇವೆ’ ಎಂದರು.

‘ಸ್ಟಾಲ್‌ಗಳನ್ನು ಹರಾಜು ಮೂಲಕ ನೀಡುವ ಬಗ್ಗೆ ಇತ್ತೀಚಿಗೆ ನಡೆದ ಪಾಲಿಕೆ ಸಭೆಯಲ್ಲಿ ಚರ್ಚೆಯಾಗಿದ್ದು, ಹರಾಜು ನಡೆದರೆ ನಾವು ಬೀದಿಗೆ ಬೀಳಬೇಕಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಶುಲ್ಕ ಹೆಚ್ಚಿಸಿದ್ದಾಗಲೂ ನಾವು ಹಣ ಕಟ್ಟಿದ್ದೇವೆ. ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳದ ವ್ಯಾಪಾರಸ್ಥರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಲಿ. ಆದರೆ, ಹರಾಜು ನಡೆಸಬಾರದು’ ಎಂದು ಅವರು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಎಸ್‌. ಹಿರೇಮಠ, ಕಾರ್ಯದರ್ಶಿ ರಮೇಶ ಪೂಜಾರಿ, ವಿವಿಧ ಮಾರುಕಟ್ಟೆಗಳ ಪದಾಧಿಕಾರಿಗಳಾದ ಮಹೇಶ ಕಮ್ಮಾರ, ಎನ್‌.ಎ. ಪೈ, ಸುರೇಶ ಕೊರ್ಲಹಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !