ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸೇನ್‌ಸಾಬ್ ಗುಡುಭಾಯಿ ಅವರ ದೇಶಸೇವೆ

ಸುಭಾಸಚಂದ್ರ ಬೋಸ್ ಅವರ ಐಎನ್‌ಎ ಸೇರಿ ದೇಶಸೇವೆ
Last Updated 13 ಆಗಸ್ಟ್ 2022, 3:46 IST
ಅಕ್ಷರ ಗಾತ್ರ

ಧಾರವಾಡ: 1940ರಲ್ಲಿಉತ್ತರಕರ್ನಾಟಕದ ಪಾಲಿಗೆ ಕಬ್ಬಿಣದಕಡಲೆಯಾಗಿತ್ತು. ದೇಶದಲ್ಲಿ ತೀವ್ರಗೊಂಡಿದ್ದ ಸ್ವಾತಂತ್ರ್ಯ ಹೋರಾಟದ ಕಾವು ಗಾಳಿಯ ವೇಗದಲ್ಲಿಎಲ್ಲೆಡೆಗೆ ಹರಡಿತ್ತು. ಇಂತಹ ಪ್ರಕ್ಷುಬ್ದ ವಾತಾವರಣದಲ್ಲಿ ಜನಿಸಿದ ಹುಸೇನಸಾಬ ಅಮೀನಸಾಬ ಗೂಡುಭಾಯಿ ಮುಂದೊಂದು ದಿನ ದೇಶದ ಸ್ವಾತಂತ್ರಕ್ಕಾಗಿ ಹೋರಾಡುತ್ತಾರೆಂಬ ಕನಸು ಯಾರಾದರೂಕಾಣಲು ಸಾಧ್ಯವೇ? ಗೂಡುಭಾಯಿಇವರು ಬುದ್ದಿಶಾಲಿ, ಬಲಶಾಲಿ, ದೇಶಭಕ್ತರಷ್ಟೇಅಲ್ಲದೇ ಬಹುಭಾಷಾ ಚತುರರಾಗಿದ್ದರು.

ಮೂಲತಃ ಬೆಳಗಾವಿಯ ಹಲಕರ್ಣಿಯವರಾದ ಇವರ ತಂದೆ ಅಮೀನಸಾಬ ಗೂಡುಭಾಯಿ ಹಾಗೂ ತಾಯಿ ಫಾತಿಮಾ ಅವರಿಗೆ ಜನಿಸಿದ ಹುಸೇನಸಾಬ ಅವರು ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಸೇನೆ ಸೇರಬೇಕೆಂಬ ಅಪರಿಮಿತ ತುಡಿತದಿಂದ 16ನೇ ವಯಸ್ಸಿನಲ್ಲಿ ಸೇನಾ ಭರ್ತಿ ರ‍್ಯಾಲಿಗೆ ಹೋಗಿದ್ದರು. ಇವರ ಮುಖದ ಮೇಲೆ ಮೀಸೆ ಇಲ್ಲದ್ದನ್ನು ಕಂಡ ಅಧಿಕಾರಿಗಳು ಇವರನ್ನ ಹೊರಗೆ ಅಟ್ಟಿದರು. ಆಗ ಇವರು 18 ತುಂಬಿದೆ ಎಂದು ಸುಳ್ಳು ದಾಖಲಾತಿ ತೋರಿಸಿ ಬ್ರಿಟಿಷ್ ಸೇನೆ ಸೇರಿಕೊಂಡರು.

ಯುದ್ಧದಲ್ಲಿ ಕೈದಿಯಾಗಿದ್ದ ಲಕ್ಷಾಂತರ ಭಾರತೀಯರನ್ನು ಉದ್ದೇಶ ಸುಭಾಸಚಂದ್ರ ಬೋಸ್ ಅವರು ಮಾಡಿದ ಭಾಷಣ ಹುಸೇನಸಾಬ ಅವರನ್ನು ಪ್ರೇರೇಪಿಸಿತು. ಬ್ರಿಟಿಷರ ಸಂಕೋಲೆಯಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸುವಂತೆ ಬೋಸರ ಮಾತಿನಿಂದ ಪ್ರೇರಣೆಗೊಂಡುಬ್ರಟಿಷರ ಸಾಮ್ರಾಜ್ಜಶಾಹಿ ಆಡಳಿತಕ್ಕೆ ಎದೆಕೊಟ್ಟು ನಿಂತರು. ಹುಸೇನಸಾಬರು ಐಎನ್‌ಎ ಸೇನೆಗೆ ಸೇರಿಕೊಂಡರು.

ಹುಸೇನಸಾಬ ಹಾಗೂ ದಾರವಾಡದವರೇ ಆದ ಇನ್ನೊಬ್ದ ಸ್ವಾತಂತ್ರ್ಯ ಹೋರಾಟಗಾರ ಗೋರ್ಪಡೆ ಇಬ್ಬರೂ ಸುಭಾಸಚಂದ್ರ ಭೋಸ್ ಅವರ ಐಎನ್‌ಎ ಸೇನೆಯಲ್ಲಿ ಆಹಾರ ಪೂರೈಸುವ ಕರ್ತವ್ಯದಲ್ಲಿದ್ದರು.

1942ರಲ್ಲಿ 2ನೇ ಮಹಾಯುದ್ಧ ಆರಂಭವಾಗಿತ್ತು. ಮಲೇಷಿಯಾದಲ್ಲಿ ಐಎನ್‌ಎ ಶಿಬಿರ ಹಾಕಿಕೊಂಡ ಸಂದರ್ಭದಲ್ಲಿ ಸೇನೆಗೆ ಬೀಕರ ಸಮಸ್ಯೆಗಳು ಬಂದೊದಗಿದವು.ಸೈನಿಕರಿಗೆ ಆಹಾರದ ಕೊರತೆ, ಗಾಯಾಳುಗಳಿಗೆ ಔಷದದ ಕೊರತೆ, ವಿಪರೀತವಾಗಿ ಕಾಡಲಾರಂಬಿಸಿತಲ್ಲದೆ, ಕಾಲರಾ ಮಹಾಮಾರಿಯ ಆಕ್ರಮಣಕ್ಕೆ ತುತ್ತಾದ ಸೈನಿಕರು ಬಳಲುತ್ತಿದ್ದರು. ಆಗ ಹೊರಗಿನ ಶತ್ರುಗಳ ದಾಳಿಯಿಂದಲೂ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅಗತ್ಯ ಔಷದ ಸಂಗ್ರಹಿಸುವುದು ಸೈನಿಕರನ್ನು ಉಳಿಸುವುದು ಸವಾಲಿನ ಸಂಗತಿಯಾಗಿ ಪರಿಣಮಿಸಿತು.

ರೋಗಿಗಳನ್ನು ಗುಣಪಡಿಸಲು ಔಷಧ ಸಂಗ್ರಹಿಸಲೆಂದೇಒಂದುತಂಡರಚಿಸಲಾಗಿತ್ತು. ಶತ್ರುಗಳ ಕಣ್ಣಿಗೆ ಬೀಳದ ಹಾಗೆಕತ್ತಲಲ್ಲಿ ಲಾಲ್‌ಟೀನವೂ (ದೀಪ) ಹಚ್ಚದೇ ಬೋಟಿನ ಮೂಲಕ ಒಂದು ಸ್ಥಳದಿಂದ ಇನ್ನೊಂದು ಶಿಬಿರಕ್ಕೆ ಔಷಧತರಲು ಹೋಗುವಾಗ ಬ್ರಟಿಷರ ಹಡಗಿಗೂ ಭಾರತೀಯರ ದೋಣಿಗೆ ಡಿಕ್ಕಿಯಾಗಿ ಬೋಟು ಚೂರುಚೂರಾಯಿತು. ಇದ್ದ 5 ಸೈನಿಕರಲ್ಲಿ ಮೂವರು ನೀರು ಪಾಲಾಗಿ ಕಾಣೆಯಾದರು. ಬದುಕುಳಿದ ಇಬ್ಬರು ಭಾರತೀಯರು ಸ್ವಾತಂತ್ರ್ಯ ಪಡೆಯುವ ಮುನ್ನವೇ ನಮ್ಮ ಪ್ರಾಣ ಹೋಗುತ್ತಿದೆ ಎಂದು ದೇವರಲ್ಲಿ ಪ್ರಾಥಿಸುತ್ತಿದ್ದಂತೆ ಒಂದು ಕಟ್ಟಿಗೆ ತುಂಡು ತೇಲುತ್ತ ಹುಸೇನಸಾಬರ ಬಳಿ ಬಂದಾಗಸೃಷ್ಠಿ ಕರ್ತನ ದಯೇಯಿಂದ ಆ ಕಟ್ಟಿಗೆತುಂಡಿನ ಸಹಾಯದಿಂದ ಇಬ್ಬರೂ ತೇಲುತ್ತ, ತೇಲುತ್ತ ದಡದತ್ತ ಬರಲು ಪ್ರಯಾಸ ಪಡುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಡುವುದನ್ನು ದೂರದಿಂದಲೇ ನೋಡಿದ ಮೀನುಗಾರರು ಅತೀ ವೇಗದಿಂದ ಬೋಟಿನ ಮೂಲಕ ಅವರಿರುವಲ್ಲಿಗೆ ಬಂದು ನಮ್ಮಜೀವ ರಕ್ಷಿಸಿದರು. ಎಂದು ನೆನೆಯುವಾಗತಂದೆಯ ಕಣ್ಣಾಲಿಗಳು ಒದ್ದೆಯಾಗಿದ್ದು ನಾನು ಹಲವಾರು ಬಾರಿ ಕಂಡಿದ್ದೇನೆ’ ಎಂದುಹುಸೇನಸಾಬರ ಕಿರಿಯ ಪುತ್ರ ಮಹಮ್ಮದ ಅಲಿ ಗೂಡುಭಾಯಿ ನೆನಪಿಸಿಕೊಂಡರು.

1945ರ ಆಗಸ್ಟ್‌ 18ರಂದುಸುಭಾಸಚಂದ್ರ ಭೋಸರು ಇನ್ನಷ್ಟು ಯುದ್ದೋಪಕರಣಗಳನ್ನು ತರಲೆಂದು ವಿಮಾನ ಮೂಲಕ ಜಪಾನಿಗೆ ಹೋಗುವಾಗ ವಿಮಾನ ಅಪಘಾತದಲ್ಲಿ ತೀರಿಕೊಂಡ ಸುದ್ದಿ ಇಡೀ ವಿಶ್ವದಲ್ಲಿ ಗಾಳಿಯ ವೇಗದಲ್ಲಿ ಹರಡಿತು. ಸಿಂಹ ಗುಂಡಿಗೆ ಪಡೆದ ಸುಭಾಸರ ಸಾವಿನ ಸುದ್ದಿ ಕೇಳಿದ ಲಕ್ಷಾಂತರ ಭಾರತಿಯರು ಕಣ್ಣೀರು ಸುರಿಸಿದರು.

ಸ್ವಾತಂತ್ರ್ಯ ಪಡೆದ ನಂತರ ಭಾರತಕ್ಕೆ ಮರಳಿದ ಗೂಡುಭಾಯಿ ಪೋಲಿಸ್ ಇಲಖೆಯಲ್ಲಿ ಸೇರಿ ಪೋಲಿಸ್ ಕಾನ್‌ಸ್ಟೆಬಲ್ ವೃತ್ತಿಗೆ ಸೇರಿಕೊಂಡುಅದರಲ್ಲಿ ಬಡ್ತಿ ಪಡೆದು ಹವಾಲ್ದಾರರಾಗಿಯೂ ಸೇವೆ ಸಲ್ಲಿಸಿದರು. ಹಾಕಿ ಆಟದಲ್ಲಿ ಆಸಕ್ತಿ ಹೊಂದಿದ ಇವರು ಪೋಲಿಸ್ ಕ್ರಿಡಾಕೂಟದಲ್ಲಿ ಭಾಗವಹಿಸಿ ಬಾಂಬೆಯ ವಾಂಖೆಡೆ ಸ್ಟೇಡಿಯಂನಲ್ಲಿ ಧಾರವಾಡದ ಪೋಲಿಸ್ ಇಲಾಖೆ ನಡೆಸಿದ ಕ್ರಿಡೆಯಲ್ಲಿ ತಮ್ಮ ಚಾತುರ್ಯ ತೋರಿಸಿ ಭೇಷ್ ಎನಿಸಿಕೊಂಡಿದ್ದರು. ನಿವೃತ್ತಿಯ ನಂತರ 12 ವರ್ಷಗಳವರೆಗೆ ಅಟೋ ಚಾಲನೆ ಮಾಡಿ ಕುಟುಂಬ ಸಲುಹಿದರು.‌

ಮರಾಠಿ, ಇಂಗ್ಲಿಷ್, ಉರ್ದು, ಕನ್ನಡ, ಹಿಂದಿ, ಕೊಂಕಣಿ, ಲಂಬಾಣಿ ಸೇರಿದಂತೆ ಸುಮಾರು 8 ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಿದ್ದರು. 2006ರ ಏ. 6ರಂದು ಹುಸೇನಸಾಬ ಗೂಡುಭಾಯಿ ಅವರು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT