ಹುಬ್ಬಳ್ಳಿ: ‘ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ನಡೆಸಿದ ಇಫ್ತಿಯಾರ್ ಕೂಟಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ (ಸಿಜೆಐ) ಪಾಲ್ಗೊಳ್ಳಬಹುದು. ಗಣೇಶ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಐ ಮನೆಗೆ ಹೋಗಬಾರದು ಎನ್ನುವುದು ಯಾವ ನ್ಯಾಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
‘ಆಹ್ವಾನದ ಮೇರೆಗೆ ಮೋದಿ ಅವರು ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಮನೆಗೆ ಹೋಗಿದ್ದರು. ಅದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮವಾಗಿದ್ದು, ಹೋಗಬಾರದೆಂದು ಎಲ್ಲಿಯೂ ಇಲ್ಲ. ಪ್ರಧಾನಿ ಅವರು ಗಣಪತಿ ಪೂಜೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.