ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರದಲ್ಲಿ ಹಾಲು ಮಾರಾಟ ಯಂತ್ರಗಳ ಸ್ಥಾಪನೆಗೆ ಸಿದ್ಧತೆ

Last Updated 5 ಡಿಸೆಂಬರ್ 2019, 9:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ತಾಜಾ ಹಾಲುಗಳನ್ನು ವಿತರಿಸುವುದು ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ (ಕೆಎಂಎಫ್‌) ಮತ್ತು ಪಾಲಿಕೆ ಅವಳಿ ನಗರದಲ್ಲಿ ಹಾಲು ಮಾರಾಟ ಯಂತ್ರಗಳ ಸ್ಥಾಪನೆಗೆ ಸಿದ್ಧತೆ ನಡೆಸಿದೆ.

ಅವಳಿ ನಗರದಾದ್ಯಂತ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಲೀಟರ್‌ ನಂದಿನಿ ಹಾಲು ಮಾರಾಟವಾಗುತ್ತದೆ. ನಂದಿನಿ ಹಾಗೂ ಖಾಸಗಿ ಕಂಪನಿಗಳು ಹಾಲು ಮಾರಾಟಗಳ ಪ್ಲಾಸ್ಟಿಕ್‌ ಪ್ಯಾಕೆಟ್‌ನಿಂದ ತ್ಯಾಜ್ಯ ಹೆಚ್ಚಾಗುತ್ತಿದೆ. ಆದ್ದರಿಂದ ಪರಿಸರ ಸ್ನೇಹಿ ಯೋಜನೆಗೆ ಕೆಎಂಎಫ್‌ ಮುಂದಾಗಿದೆ.

ಕೆಎಂಎಫ್‌ ಕೂಡ ಟೆಟ್ರಾ ಪ್ಯಾಕ್‌ ಮೂಲಕ ಹಾಲು ಮಾರಾಟ ಮಾಡಿ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವ ಹೊಸ ದಾರಿಗಳತ್ತ ನೋಡುತ್ತಿದೆ. ಪ್ರತಿ ಅರ್ಧ ಕಿ.ಮೀ. ಅಂತರದಲ್ಲಿ ಒಂದು ಯಂತ್ರ ಆರಂಭಿಸಲು ಯೋಜಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಹುಬ್ಬಳ್ಳಿಯಲ್ಲಿ 24 ಮತ್ತು ಧಾರವಾಡದಲ್ಲಿ 18 ಸ್ಥಳಗಳಲ್ಲಿ ಯಂತ್ರಗಳನ್ನು ಸ್ಥಾಪಿಸಲಾಗುತ್ತದೆ.

ಕೆಎಂಎಫ್‌ ಧಾರವಾಡದ ಆಡಳಿತ ಮಂಡಳಿ ನಿರ್ದೇಶಕ ಸುರೇಶ ನಾಯ್ಕ ‘ಅವಳಿ ನಗರದಲ್ಲಿ ಹಾಲು ಮಾರಾಟದ ಯಂತ್ರಗಳ ಸ್ಥಾಪನೆಗೆ 133 ಸ್ಥಳಗಳನ್ನು ನೋಡಿದ್ದೇವೆ. ಯಂತ್ರಗಳು 100, 250 ಮತ್ತು 500 ಮಿಲಿ ಲೀಟರ್‌ ಮತ್ತು ಒಂದು ಲೀಟರ್‌ ಹಾಲು ಪೂರೈಸುತ್ತವೆ’ ಎಂದರು.

ಖಾಸಗಿ ಕಂಪನಿಗಳೇ ಯಂತ್ರಗಳನ್ನು ಸ್ಥಾಪಿಸಿ, ನಿರ್ವಹಣೆ ಮಾಡುತ್ತವೆ. ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಈ ಯೋಜನೆ ಈಗಿನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅನುಷ್ಠಾನಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಯಂತ್ರಗಳನ್ನು ಅಳವಡಿಸಲು ಅಗತ್ಯವಿರುವ ಜಾಗವನ್ನು ನಾವು ನೀಡುತ್ತೇವೆ. ಯಂತ್ರಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬುದರ ಬಗ್ಗೆ ಕೆಎಂಎಫ್‌ ನಿರ್ಧರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT