ಕಣ್ಣೀರಿಟ್ಟು ಹೊರನಡೆದ ವಿದ್ಯಾರ್ಥಿನಿಯರು

7
ಪ್ರೆಜೆಂಟೇಶನ್ ಬಾಲಕಿಯರ ಬ್ಯಾಂಡ್‌ ತಂಡಕ್ಕೆ ಸಿಗದ ಅವಕಾಶ

ಕಣ್ಣೀರಿಟ್ಟು ಹೊರನಡೆದ ವಿದ್ಯಾರ್ಥಿನಿಯರು

Published:
Updated:
Deccan Herald

ಧಾರವಾಡ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಬ್ಯಾಂಡ್ ಬಾರಿಸಲು ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ ಇಲ್ಲಿನ ಪ್ರಜೆಂಟೇಶನ್ ಪ್ರೌಢಶಾಲಾ ವಿದ್ಯಾರ್ಥಿನಿಯರು ಕಣ್ಣೀರಿಡುತ್ತಾ ಕ್ರೀಡಾಂಗಣದಿಂದ ಬುಧವಾರ ಹೊರನಡೆದರು.

ಜಿಲ್ಲಾಡಳಿತದ ವತಿಯಿಂದ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಗೆ ಪ್ರೆಜೆಂಟೇಶನ್ ಪ್ರೌಢಶಾಲೆಯ ಬಾಲಕಿಯರ ಬ್ಯಾಂಡ್ ತಂಡ ಸಜ್ಜಾಗಿತ್ತು. ಇದಕ್ಕಾಗಿ ಮಳೆಯಲ್ಲಿ ಹದಿನೈದು ದಿನಗಳ ಕಾಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಶಿಷ್ಟಾಚಾರದ ಹಿನ್ನೆಲೆಯಲ್ಲಿ ಪ್ರಜೆಂಟೇಶನ್ ಶಾಲಾ ಮಕ್ಕಳಿಗೆ ಬ್ಯಾಂಡ್ ಬಾರಿಸಲು ಅವಕಾಶ ಸಿಗದ ಕಾರಣ ಬಾಲಕಿಯರು ತೀವ್ರ ಬೇಸರದಿಂದ ಕಣ್ಣೀರು ಹಾಕಿದರು.

ನಾಲ್ಕೈದು ದಿನಗಳಿಂದ ಸ್ವಾಂತಂತ್ರೋತ್ಸವದ ಪೂರ್ವ ತಯಾರಿಯಲ್ಲಿ ಭಾಗವಹಿಸಿದ್ದ ಈ ಶಾಲೆಯ ಮಕ್ಕಳು ಕೊನೆಗೂ ಅವಕಾಶ ಸಿಗದೇ ಬಿಕ್ಕಿ ಬಿಕ್ಕಿ ಅತ್ತರು. ನಮಗೆ ಒಂದು ಅವಕಾಶ ಕೊಟ್ಟಿದ್ದರೆ ಉತ್ತಮವಾಗಿ ಬ್ಯಾಂಡ್ ನುಡಿಸುತ್ತಿದ್ದೆವು. ಜಿಲ್ಲಾಧಿಕಾರಿ ಅವರು ನಮ್ಮ ಪ್ರತಿಭೆ ನೋಡಿ ಬ್ಯಾಂಡ್ ಬಾರಿಸಲು ಅವಕಾಶ ನೀಡಿದ್ದರೂ, ಪೊಲೀಸರು ಅವಕಾಶ ನೀಡಲಿಲ್ಲ ಎಂದು ಮಕ್ಕಳು ಅಳಲು ತೋಡಿಕೊಂಡರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್‌, ‘ಪ್ರಜೆಂಟೇಶನ್ ಶಾಲೆ ಮಕ್ಕಳು ಪೂರ್ವ ತಯಾರಿ ನಡೆಸಿದ್ದರು. ಆದರೆ, ಶಿಷ್ಟಾಚಾರದ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ದೊರಕಿಲ್ಲ. ಮುಂದಿನ ಬಾರಿ ಆ ಮಕ್ಕಳಿಗೆ ಅವಕಾಶ ನೀಡಲಾಗುವುದು’ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !