ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಕ್ತಿ ಸಮರ್ಪಣೆಗೆ ಇಷ್ಟಲಿಂಗ ಪೂಜೆ’

Published : 29 ಆಗಸ್ಟ್ 2024, 14:33 IST
Last Updated : 29 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ಧಾರವಾಡ: ‘ಪರಮಾತ್ಮನ ಆರಾಧನೆಗೆ ಇಷ್ಟಲಿಂಗ ಪೂಜೆ ಅವಶ್ಯ’ ಎಂದು ಮುಂಡಗೋಡದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.

ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಬಸವೇಶ್ವರ ಧರ್ಮ ಫಂಡ ವತಿಯಿಂದ ಗುರುವಾರ ಏರ್ಪಡಿಸಿದ್ದ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಷ್ಟಲಿಂಗ ಪೂಜೆ ಮಾಡಲು ಜಾತಿ, ಮತ, ಪಂಥ, ಭೇದ ಇಲ್ಲ. ಇದು ದೇವರಿಗೆ ಭಕ್ತಿ ಸಮರ್ಪಿಸುವ ವಿಧಾನ’ ಎಂದರು. 

ಬಸವೇಶ್ವರ ಧರ್ಮ ಫಂಡ ಅಧ್ಯಕ್ಷ ಎಸ್.ಆರ್. ರಾಮನಗೌಡರ, ಕೆ.ಎಂ. ಗೌಡರ, ಆರ್.ವೈ. ಸುಳ್ಳದ, ಬಸವರಾಜ ಸೂರಗೊಂಡ, ಟಿ.ಎಲ್. ಪಾಟೀಲ, ವಿಜೇಂದ್ರ ಪಾಟೀಲ, ಎನ್.ಬಿ. ಗೋಲಣ್ಣವರ, ಆರ್.ಡಿ. ಹಿರೇಗೌಡರ, ವೀರಣ್ಣ ಗಟಿಗೆಣ್ಣವರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT