ಧಾರವಾಡ: ಕನ್ನಡ ಜನಪದ ಲೋಕಕ್ಕೆ ಬಿ.ಎಸ್.ಗದ್ದಗಿಮಠ ಕೊಡುಗೆ ಅಪಾರ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶುಕ್ರವಾರ ನಡೆದ ಬಿ.ಎಸ್.ಗದ್ದಗಿಮಠ ದತ್ತಿ ಕಾರ್ಯಕ್ರಮದಲ್ಲಿ ಬಿ.ಎಸ್.ಗದ್ದಗಿಮಠ `ಕನ್ನಡ ಜಾನಪದ ತಜ್ಞ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಗದ್ದಗಿಮಠ ಅವರು ಯಾವುದೇ ಅಪೇಕ್ಷೆಯೂ ಇಲ್ಲದೆ, ರಸ್ತೆ ಸಾರಿಗೆ ಸೌಕರ್ಯಗಳೇ ಇಲ್ಲದ ಕಾಲದಲ್ಲಿ ಹಳ್ಳಿಗಳು ಸುತ್ತಾಡಿ ಜನಪದ ಸಂಗ್ರಹಿಸಿದ್ದು ಅದ್ಭುತ. ಗದ್ದಗಿಮಠರ ಹೆಸರಿನ ಪ್ರಶಸ್ತಿಯು ಘನತೆ ತಂದುಕೊಟ್ಟಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಪಿ.ಕೆ.ಖಂಡೋಬಾ ಅವರು ಮಾತನಾಡಿ, ‘ಸ್ವಾತಂತ್ರ್ಯಪೂರ್ವದಲ್ಲಿ ಅಲಸಂಗಿ ಗೆಳೆಯರ ಬಳಗ ಹಾಗೂ ಸ್ವಾತಂತ್ರ್ಯ ನಂತರ ಬಿ.ಎಸ್.ಗದ್ದಗಿಮಠ ಅವರು ಜನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಶಿಗ್ಗಾವಿಯ ಜಾನಪದ ವಿಶ್ವವಿದ್ಯಾಲಯಕ್ಕೆ
ಗದ್ದಗಿಮಠ ಅವರ ಹೆಸರ ನಾಮಕರಣ ಮಾಡಬೇಕು. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದರು.

‘ಮೂರು ವರ್ಷಗಳಿಗೊಮ್ಮೆ ಜನಪದ ಸಮ್ಮೇಳನ ನಡೆಸಬೇಕು. ಗದ್ದಗಿಮಠ ಅವರ ಸಾಕ್ಷ್ಯಚಿತ್ರ ತಯಾರಿಸಿ ಗ್ರಾಮೀಣ ಭಾಗದಲ್ಲಿ ಭಿತ್ತರಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಜನಪದ ಕಲಾವಿದರಿಗೆ ಉತ್ತೇಜನ ನೀಡಬೇಕು’ ಎಂದರು.

ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿ.ವಿ ಕುಲಪತಿ ಪ್ರೊ.ಎ.ಎಂ.ಖಾನ್, ದತ್ತಿ ದಾನಿಗಳಾದ ಪುಲಕೇಶಿ ಗದ್ದಗಿಮಠ, ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.