ಧಾರವಾಡ: ಕೇಂದ್ರ ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆ ಕೈಬಿಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಪವರ್ ಫೆಡರೇಷನ್ (ಎಐಪಿಎಫ್), ರಾಜ್ಯ ವಿದ್ಯುತ್ ಬಳಕೆದಾರರ ಸಂಘ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಸೂದೆಯ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ತಿದ್ದುಪಡಿ ಮಸೂದೆಯಲ್ಲಿನ ಅಂಶಗಳು ವಿದ್ಯುತ್ ವಿತರಣಾ ವಲಯದ ಖಾಸಗೀಕರಣ ಮತ್ತು ವಿಘಟನೆಯನ್ನು ಉತ್ತೇಜಿಸುತ್ತವೆ. ವಿದ್ಯುತ್ ವಿತರಣಾ ವ್ಯವಸ್ಥೆಯ ಸಾರ್ವಜನಿಕ ಮಾಲೀಕತ್ವ, ಸಾರ್ವಜನಿಕ ಉಪಯುಕ್ತತೆ ಸ್ವರೂಪ ಮತ್ತು ನೌಕರರ ರಕ್ಷಣೆಯನ್ನು ಖಚಿತಪಡಿಸಬೇಕು’ ಎಂದು ಆಗ್ರಹಿಸಿದರು.

ಎಐಪಿಎಫ್ ರಾಜ್ಯ ಕಾರ್ಯದರ್ಶಿ ಗಂಗಾಧರ ಬಡಿಗೇರ, ಸದಸ್ಯ ಬೀರೇಶ್ ಸಾಲಗಾರ, ಭುವನಾ ಬಳ್ಳಾರಿ, ದೀಪಾ ಧಾರವಾಡ, ಶರಣು ಗೋನವರ, ಯೋಗಪ್ಪ ಜೊತೆಪ್ಪನವರ, ಶೋಭಾ, ಮಾಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.