ಮಂಗಳವಾರ, ಡಿಸೆಂಬರ್ 10, 2019
23 °C

ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ್ ರಚಿಸಿಲ್ಲವೆಂದು ಅವಮಾನಿಸಿದ ಶಿಕ್ಷಣ ಸಚಿವರನ್ನು, ಸಂಪುಟದಿಂದ ಕೈಬಿಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದವತಿಯಿಂದ ಮಂಗಳವಾರ ಪಟ್ಟಣದ ಎ.ಪಿ.ಎಂ.ಸಿಯಿoದ ತಹಶೀಲ್ದಾರ್‌ ಕಛೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

 ಶಿಕ್ಷಣ ಇಲಾಖೆ ಸಚಿವ ಸುರೇಶಕುಮಾರ್‌ ಹಾಗೂ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅವರ ಪ್ರತಿಕೃತಿಯ ಭಾವಚಿತ್ರದ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರಶೇಖರ ನಡುವಿನಮನಿ, ಬಸವರಾಜ ಮಾದರ, ಶರೀಫ್ ಮಾದರ, ದ್ಯಾಮಣ್ಣ ಮಾದರ, ಈರಪ್ಪ ಕಟ್ಟಿಮನಿ, ಮಂಜು ಹೊಸಮನಿ, ಪೀರಸಾಬ ಕಮಡೊಳ್ಳಿ, ಗುರುನಾಥ ಮಾದರ, ಶಶಿ ಕಟ್ಟಿಮನಿ, ಮಂಜುನಾಥ ನಡುವಿನಮನಿ, ಯಲ್ಲಪ್ಪ ಮೇಲಿನಮನಿ, ಗೋಪಾಲ ಹರಿಜನ ಹಾಗೂ ಪ್ರಶಾಂತ ಅಣ್ಣಿಗೇರಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಉಪಸ್ಥರಿದ್ದರು.

ಪ್ರತಿಕ್ರಿಯಿಸಿ (+)