ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಪ್ರತ್ಯೇಕ ಪಾಲಿಕೆ ಮಹಾನಗರ ಪಾಲಿಕೆ ವೇದಿಕೆಯವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ತೀವ್ರಗೊಂಡಿದೆ. ಹೋರಾಟಗಾರರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಪ್ರತಿಭಟನಾಕಾರರು ಪ್ರತಿಭಟನೆ ವೇದಿಕೆಯಲ್ಲಿ ರಾತ್ರಿ ಭೋಜನ ಮಾಡಿದರು. ರೊಟ್ಟಿ, ಪಲ್ಲೆ, ಅನ್ನ, ಸಂಬಾರು ಸವಿದರು. ಮಲಗಲು ಅಲ್ಲಿಯೇ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

‘ಈಗ ಅಹೋರಾತ್ರಿ ಧರಣಿಯಲ್ಲಿ ತೊಡಗಿದ್ದೇವೆ. 31ರಂದು ಉಪವಾಸ ಸತ್ಯಾಗ್ರಹ ಮಾಡುತ್ತೇವೆ’ ಎಂದು ಹಿರಿಯ ವಕೀಲ ಬಿ.ಡಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಕವಿತಾ ಕಬ್ಬೇರ, ರಾಜಶೇಖರ ಕಮತಿ, ತಳಜಪ್ಪ ಪೂಜಾರ್, ಶಿವಶಂಕರ ಹಂಪಣ್ಣವರ, ವೀರಣ್ಣ, ರವಿ ಮಾಳಿಗೇರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.