‘ಸಾರಿಗೆ ಸೇವೆ ಬಿಆರ್‌ಟಿಎಸ್‌ ಸುಪರ್ದಿಗೆ ಬೇಡ’

7

‘ಸಾರಿಗೆ ಸೇವೆ ಬಿಆರ್‌ಟಿಎಸ್‌ ಸುಪರ್ದಿಗೆ ಬೇಡ’

Published:
Updated:

ಹುಬ್ಬಳ್ಳಿ: ಬಿಆರ್‌ಟಿಎಸ್ ಕಂಪನಿಯು ಸಾರಿಗೆ ಸೇವೆಯನ್ನು ನಡೆಸುವಲ್ಲಿ ಯಾವುದೇ ಅನುಭವ ಹೊಂದಿಲ್ಲ. ಹಾಗಾಗಿ, ಬಿಆರ್‌ಟಿಎಸ್‌ ಕಂಪನಿಯ ಬದಲು ಸಾರಿಗೆ ಸೇವೆಯ ನಿರ್ವಹಣೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೇ ನೀಡಬೇಕು ಎಂದು ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್‌ ವರ್ಕರ್ಸ್‌ ಯೂನಿಯನ್‌ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಬಿಆರ್‌ಟಿಎಸ್‌ ಖರೀದಿಸಿರುವ ವೋಲ್ವೊ ಬಸ್‌ಗಳಿಗೆ ಹೆಚ್ಚು ಇಂಧನ ಬೇಕಾಗುತ್ತದೆ. ಇದನ್ನು ನಿರ್ವಹಣೆ ಮಾಡಲು ನುರಿತ ಸಿಬ್ಬಂದಿ ಬೇಕಾಗುತ್ತದೆ. ಅಂತಹ ಸಿಬ್ಬಂದಿ ನಮ್ಮಲ್ಲಿದ್ದು, ನಮ್ಮ ಸೇವೆಯನ್ನೇ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ನಷ್ಟದ ನೆಪ ಹೇಳಿ ಖಾಸಗಿಯವರಿಗೆ ವಹಿಸುವ ಎಲ್ಲ ಸಾಧ್ಯತೆಯೂ ಇದೆ ಎಂದು ಪ್ರತಿಭಟನಾಕಾರರು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಸಿ ಅನುಸೂಚಿಗಳಿಗೆ ಇತರ ರಾಜ್ಯಗಳಲ್ಲಿ ಸರ್ಕಾರವೇ ಹಣ ಭರಿಸುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ವಾರ್ಷಿಕ ₹ 500 ಕೋಟಿ ಹಣವನ್ನು ಸಂಸ್ಥೆಗೆ ನೀಡಬೇಕು. ಸಂಸ್ಥೆಯ ವರಮಾನ ಹೆಚ್ಚಿಸಲು ಖಾಸಗಿ ವಾಹನಗಳ ಅನಧಿಕೃತ ಓಡಾಟವನ್ನು ನಿರ್ಬಂಧಿಸಬೇಕು. ಸಂಸ್ಥೆಯ ಬಸ್ಸುಗಳಿಗೆ ಟೋಲ್‌ ಶುಲ್ಕದಿಂದ ವಿನಾಯಿತಿ ನೀಡಬೇಕು. ಸಂಸ್ಥೆಗೆ ಪೂರೈಸುವ ಇಂಧನದ ಮೇಲಿನ ಸುಂಕವನ್ನು ತೆಗೆದುಹಾಕಬೇಕು. ಸಾಮಾಜಿಕ ಹೊಣೆಗಾರಿಕೆ ಅಂಗವಾಗಿ ರಿಯಾಯಿತಿ ದರದಲ್ಲಿ ನೀಡುವ ಬಸ್‌ ಪಾಸಿನ ಮೊತ್ತವನ್ನು ಸರ್ಕಾರವೇ ಭರಿಸಬೇಕು. ಅವಳಿ ನಗರದ ಮಧ್ಯೆ ಸಂಚರಿಸುತ್ತಿರುವ ಬೇಂದ್ರೆ ಬಸ್‌ ಸಂಚಾರವನ್ನು ನಿಲ್ಲಿಸಬೇಕು. ಸಾರಿಗೆ ನಿಗಮದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್‌.ಎಫ್‌. ಕವಳಿಕಾಯಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !