ಟಾಯ್ಲೆಟ್‌ ನಿರ್ಮಿಸಿ, ಪುಣ್ಯ ಕಟ್ಕೊಳ್ಳಿ!

7

ಟಾಯ್ಲೆಟ್‌ ನಿರ್ಮಿಸಿ, ಪುಣ್ಯ ಕಟ್ಕೊಳ್ಳಿ!

Published:
Updated:

ಮೂಗು ಮುಚ್ಚಿಕೊಂಡು ಓಡಾಡಬೇಕೇ?

ಮಲ್ಲೇಶ್ವರದ ಎಂಟನೇ ಅಡ್ಡರಸ್ತೆ, ದೊಡ್ಡ ಗಣಪತಿ ದೇವಾಲಯದ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಮಾರುಕಟ್ಟೆ ಎರಡು, ಮೂರು ವರ್ಷಗಳಿಂದ ಉಪಯೋಗವಾಗದೆ ಅವ್ಯವಸ್ಥೆಯ ಗೂಡಾಗಿದೆ. ಅಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಪರಿಶೀಲಿಸಿ.

ಸುಲೋಚನಾ ಜೆ.ರಾವ್‌, ಮಲ್ಲೇಶ್ವರ

ಕಸದ ತೊಟ್ಟಿ ಇಡಬಹುದಲ್ಲವೇ?

ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ಸಂಖ್ಯೆ ಹೆಚ್ಚಿದೆ. ಅಸಮರ್ಪಕ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ರಸ್ತೆ ಬದಿಯಲ್ಲಿ ದೊಡ್ಡ ಕಸದ ತೊಟ್ಟಿ ಇಟ್ಟು ಜನರಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡಬಹುದು. ಪ್ರಯತ್ನಿಸಿ.

ಯಶೋದಾ ಗೋವಿಂದರಾಜು, ವಿದ್ಯಾನಗರ

ಶೌಚಾಲಯ ನಿರ್ಮಿಸಿ

ಮೇಖ್ರಿ ವೃತ್ತ ಬಸ್‌ ನಿಲ್ದಾಣದಿಂದ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಆದರೆ ಇಲ್ಲಿ ಯಾವುದೇ ಶೌಚಾಲಯವೇ ಇಲ್ಲ. ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ. ಈ ಕೂಡಲೇ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡಿ.

ಸಂತೋಷ್‌

ರ‍್ಯಾಂಕಿಂಗ್‌ ವ್ಯವಸ್ಥೆ ಮಾಡಿ

ಎಲ್ಲಾ ವಾರ್ಡ್‌ಗಳಲ್ಲೂ ಮೂಲಸೌಕರ್ಯ ಹಾಗೂ ಕಸ ನಿರ್ವಹಣೆ ವ್ಯವಸ್ಥೆ ಸರಿಯಾಗಿ ಆಗಬೇಕಾದರೆ ರ‍್ಯಾಂಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತನ್ನಿ. ಇದರಿಂದ ಕಾರ್ಪೊರೇಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಶುಚಿಯಾಗಿ ಇಟ್ಟು
ಕೊಳ್ಳುತ್ತಾರೆ.

ಶಿಲ್ಪಾ, ಬ್ಯಾಡರಹಳ್ಳಿ

ರಸ್ತೆ ಸರಿಪಡಿಸಿ

ಬನ್ನೇರುಘಟ್ಟ ರಸ್ತೆಯ, ಲಕ್ಷ್ಮಿ ಲೇಔಟ್‌ನ 8ನೇ ಅಡ್ಡರಸ್ತೆ ಶೋಚನೀಯ ಸ್ಥಿತಿಯಲ್ಲಿದೆ. ಆರು ತಿಂಗಳಿನಿಂದ ಈ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ದಯವಿಟ್ಟು ಸರಿಪಡಿಸಿ.

ಎಸ್‌.ವೈ.ವಿಜಯಕುಮಾರ್‌, ಅರಕೆರೆ

ರಸ್ತೆ ದಾಟಲು ಆಗುತ್ತಿಲ್ಲ

ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತುಮಕೂರು ರಸ್ತೆ ಕಡೆಯಿಂದ ಬರುವ ಹಾಗೂ ಹೋಗುವ ಪ್ರಯಾಣಿಕರು ರಸ್ತೆ ದಾಟಲು ಪರದಾಡುವಂತೆ ಆಗಿದೆ. ಯಶವಂತಪುರ ಮೆಟ್ರೊ ನಿಲ್ದಾಣದ ಬಳಿ ರಸ್ತೆ ದಾಟಲು ಮೇಲ್ಸೇತುವೆ ಅಥವಾ ಸುರಂಗಮಾರ್ಗ ಮಾಡಿ. ಈಗ ಇರುವ ಮೇಲ್ಸೇತುವೆ ತುಂಬಾ ದೂರದಲ್ಲಿದೆ. ಅಲ್ಲಿಂದ ನಡಕೊಂಡು ಬರುವುದು ಜೀವ ಪಣಕ್ಕಿಟ್ಟಂತೆ

ಸತ್ಯನಾಭ

ಹೊಳೆಯಾಗುವುದನ್ನು ತಪ್ಪಿಸಿ

ನಗರದ ರಸ್ತೆಗಳು ಸಣ್ಣ ಮಳೆಗೆ ಹೊಳೆಯಾಗಿ ಪರಿವರ್ತನೆಯಾಗುತ್ತವೆ. ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಿದರೆ ಈ ಸ್ಥಿತಿ ನಿರ್ಮಾಣವಾಗುವುದಿಲ್ಲ. ಕೇಂದ್ರ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ದಯವಿಟ್ಟು ಗಮನಹರಿಸಿ

ವೀರಣ್ಣ ಬಳಿಗೇರ, ಯಶವಂತಪುರ

ಮ್ಯಾನ್‌ ಹೋಲ್‌ ಸರಿಪಡಿಸಿ

ಚಾಮರಾಜಪೇಟೆಯ ಒಂದನೇ ಮುಖ್ಯರಸ್ತೆ, ಒಂದನೇ ಅಡ್ಡರಸ್ತೆಯಲ್ಲಿರುವ ಮ್ಯಾನ್‌ಹೋಲ್‌ ತುಂಬಿ ರಸ್ತೆಗೆ ನೀರು ಹರಿಯುತ್ತಿದೆ. ಹದಿನೈದು ದಿನಗಳಿಂದ ಇಲ್ಲಿ ಓಡಾಡಲು ಕಷ್ಟವಾಗುತ್ತಿದೆ. ದಯವಿಟ್ಟು ಸರಿಪಡಿಸಿ

ರವೀಂದ್ರ ಕುಮಾರ್

ಕೆಟ್ಟ ರಸ್ತೆಗೆ ಪರಿಹಾರ ನೀಡಿ

ಆರ್‌.ವಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಸಂಸ್ಥೆಯ ಎದುರಿನ ರಸ್ತೆ ಕೆಟ್ಟ ಸ್ಥಿತಿಯಲ್ಲಿದೆ. ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನರು ಇಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗೊಂದು ಪರಿಹಾರ ಒದಗಿಸಿ

.ಬಿ.ಎಸ್‌.ಆದರ್ಶ್‌, ಕೆಂಗೇರಿ

ನಮ್ಮ ಬಡಾವಣೆಗೆ ಬನ್ನಿ

ಹೊಂಬೇಗೌಡ ನಗರದ ವಿಲ್ಸನ್‌ ಗಾರ್ಡನ್‌ಗೆ ಒಮ್ಮೆ ಭೇಟಿಕೊಡಿ. ಇಲ್ಲಿ ರಸ್ತೆಗಳು ಸರಿಯಾಗಿಲ್ಲ. ಒಳಚರಂಡಿ ವ್ಯವಸ್ಥೆ ಕೂಡ ಕೆಟ್ಟ ಸ್ಥಿತಿಯಲ್ಲಿದೆ. ಈ ಅವ್ಯವಸ್ಥೆಯನ್ನು ಇನ್ನೂ ಎಷ್ಟು ದಿನ ಹೀಗೇ ಮುಂದುವರಿಯಲು ಬಿಡುತ್ತೀರಿ?
ಜಗದೀಶ್‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !