ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನಿಲ್ದಾಣದಲ್ಲಿ ‘ಪಬ್ಲಿಕ್‌ ಸ್ಟೋರ್‌’

Last Updated 22 ಆಗಸ್ಟ್ 2019, 16:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣಕ್ಕೆ ಬರುವವರು ಸ್ವೆಟರ್‌, ಬ್ಲ್ಯಾಂಕೆಟ್‌ ಮರೆತು ಬಂದಿದ್ದರೆ ಚಿಂತೆಯಿಲ್ಲ; ಏಕೆಂದರೆ ಇನ್ನು ಮುಂದೆ ನಿಲ್ದಾಣದಲ್ಲಿಯೇ ಇವೆಲ್ಲವೂ ಉಚಿತವಾಗಿ ಸಿಗಲಿವೆ.

ಪ್ರಯಾಣಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೈರುತ್ಯ ರೈಲ್ವೆ, ಹುಬ್ಬಳ್ಳಿ ಪರ್ಲ್ಸ್‌ ಲಯನ್ಸ್ ಕ್ಲಬ್‌ ಸಹಯೋಗದಲ್ಲಿ ಗುರುವಾರ ನಿಲ್ದಾಣದಲ್ಲಿ ‘ಪಬ್ಲಿಕ್‌ ಸ್ಟೋರ್‌’ ಆರಂಭಿಸಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಸ್ವೆಟರ್‌, ಶೂ, ಬ್ಲ್ಯಾಂಕೆಟ್‌, ಬಟ್ಟೆಗಳು, ಪಾದರಕ್ಷೆಗಳನ್ನು ಸ್ಟೋರ್‌ನಲ್ಲಿ ಇಡಲಾಗಿದೆ. ಅಗತ್ಯ ಇರುವವರು ಅವುಗಳನ್ನು ತೆಗೆದುಕೊಂಡು ಹೋಗಬಹುದು. ತಮ್ಮ ಬಳಿ ಇದ್ದವರು ಸ್ಟೋರ್‌ನಲ್ಲಿ ಇಡಬಹುದು.

ಹುಬ್ಬಳ್ಳಿ ವಿಭಾಗದ ಹಿರಿಯ ವ್ಯವಸ್ಥಾಪಕ (ವಾಣಿಜ್ಯ) ಐ. ಸೇಂಥಿಲ್‌ ಕುಮಾರ್ ಅವರು ಸ್ಟೋರ್‌ಗೆ ಚಾಲನೆ ನೀಡಿ ಅಗತ್ಯವಿರುವವರಿಗೆ ಬ್ಲ್ಯಾಂಕೆಟ್‌ ವಿತರಿಸಿದರು.

‘ಅಗತ್ಯವಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಪಬ್ಲಿಕ್‌ ಸ್ಟೋರ್‌ ಆರಂಭಿಸಲಾಗಿದೆ. ತಮ್ಮ ಬಳಿ ಹೆಚ್ಚುವರಿಯಾಗಿ ಇದ್ದ ವಸ್ತುಗಳನ್ನು ಸ್ಟೋರ್‌ನಲ್ಲಿ ಇಟ್ಟರೆ ಬೇರೆಯವರಿಗೆ ನೆರವಾದಂತಾಗುತ್ತದೆ. ಲಯನ್ಸ್‌ ಕ್ಲಬ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ’ ಎಂದು ಸೇಂಥಿಲ್‌ ಹೇಳಿದರು.

ಕ್ಲಬ್‌ನ ಅಧ್ಯಕ್ಷ ಪ್ರಶಾಂತ ಅಗರವಾಲ್‌ ಮಾತನಾಡಿ ‘ರೈಲ್ವೆ ಇಲಾಖೆಯ ನೆರವಿನಿಂದ ನಿಲ್ದಾಣದಲ್ಲಿ ಪಬ್ಲಿಕ್‌ ಸ್ಟೋರ್ ಆರಂಭಿಸಲು ಸಾಧ್ಯವಾಗಿದೆ. ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು, ತಮ್ಮಲ್ಲಿರುವ ವಸ್ತುಗಳನ್ನು ಸ್ಟೋರ್‌ನಲ್ಲಿ ಇಟ್ಟರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸ್ಟೋರ್‌ಗೆ ಇನ್ನಷ್ಟು ವಸ್ತುಗಳು ಅಗತ್ಯವಿದ್ದರೆ ನೀಡಲು ಸಿದ್ಧರಿದ್ದೇವೆ’ ಎಂದರು. ರೈಲ್ವೆ ಸಿಬ್ಬಂದಿ ಮತ್ತು ಲಯನ್ಸ್ ಕ್ಲಬ್‌ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT