ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈರುತ್ಯ ರೈಲ್ವೆ : ಹುಬ್ಬಳ್ಳಿ–ಅಂಕೋಲಾ ಮಾರ್ಗಕ್ಕೆ ₹20 ಕೋಟಿ

Published 19 ಆಗಸ್ಟ್ 2024, 16:40 IST
Last Updated 19 ಆಗಸ್ಟ್ 2024, 16:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹6,493.87 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ₹1,448.89 ಕೋಟಿ ನಿಗದಿಪಡಿಸಲಾಗಿದೆ. ಅವುಗಳಲ್ಲಿ ಹುಬ್ಬಳ್ಳಿ–ಅಂಕೋಲಾ ಮಾರ್ಗಕ್ಕೆ ₹20 ಕೋಟಿ ಅನುದಾನ ನೀಡಲಾಗಿದೆ.

ರೈಲು ಹಳಿ ದ್ವಿಪಥವಾಗಿ ಮೇಲ್ದರ್ಜೆಗೇರಿಸಲು ₹1,241 ಕೋಟಿ ಹಾಗೂ ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಗೆ ₹961.22 ಕೋಟಿ ನಿಗದಿಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಅಮೃತ ಭಾರತ ಯೋಜನೆಯಡಿ 51 ನಿಲ್ದಾಣಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. 

ಹೊಸ ಮಾರ್ಗಗಳು:

ಹಾಸನ– ಬೆಂಗಳೂರು (ಶ್ರವಣಬೆಳಗೊಳ ಮಾರ್ಗವಾಗಿ), ಹುಬ್ಬಳ್ಳಿ–ಅಂಕೋಲಾ ಹಾಗೂ ಬೆಳಗಾವಿ–ಧಾರವಾಡ (ಕಿತ್ತೂರು ಮಾರ್ಗವಾಗಿ) ನೂತನ ಮಾರ್ಗ ನಿರ್ಮಾಣಕ್ಕಾಗಿ ತಲಾ ₹20 ಕೋಟಿ, ಗದಗ (ತಳಕಲ್) –ವಾಡಿ ಮಾರ್ಗಕ್ಕಾಗಿ ₹200 ಕೋಟಿ, ತುಮಕೂರು–ದಾವಣಗೆರೆ (ಚಿತ್ರದುರ್ಗ ಮಾರ್ಗವಾಗಿ), ಬಾಗಲಕೋಟೆ–ಕುಡಚಿ, ಗದಗ–ಯಲವಿಗಿ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗಗಳಿಗೆ ತಲಾ (₹150 ಕೋಟಿ), ಕಡೂರು–ಚಿಕ್ಕಮಗಳೂರು–ಹಾಸನ (₹70 ಕೋಟಿ), ತುಮಕೂರು–ರಾಯದುರ್ಗ (ಕಲ್ಯಾಣದುರ್ಗ ಮಾರ್ಗವಾಗಿ) ₹250 ಕೋಟಿ, ಮಾರಿಕುಪ್ಪಮ್–ಕುಪ್ಪಮ್ (₹60 ಕೋಟಿ), ಮಲಗೂರು–ಪಾಲಸಮುದ್ರಮ್ (₹21 ಕೋಟಿ), ಮುನಿರಾಬಾದ್–ಮಹಬೂಬನಗರ (₹100 ಕೋಟಿ) ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT