ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈರುತ್ಯ ರೈಲ್ವೆ ಬಜೆಟ್: ಹೊಸ ಮಾರ್ಗಕ್ಕೆ ₹1,448.89 ಕೋಟಿ

Published 19 ಆಗಸ್ಟ್ 2024, 16:33 IST
Last Updated 19 ಆಗಸ್ಟ್ 2024, 16:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹6,493.87 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ₹1,448.89 ಕೋಟಿ ನಿಗದಿಪಡಿಸಲಾಗಿದೆ.

ರೈಲು ಹಳಿ ದ್ವಿಪಥವಾಗಿ ಮೇಲ್ದರ್ಜೆಗೇರಿಸಲು ₹1,241 ಕೋಟಿ ಹಾಗೂ ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಗೆ ₹961.22 ಕೋಟಿ ನಿಗದಿಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲ್ವೆ ಮೇಲ್ಸೇತುವೆ, ಕೆಳಸೇತುವೆಯಂತಹ ಕಾಮಗಾರಿಗೆ ₹349.40 ಕೋಟಿ ಮತ್ತು ಸಂಚಾರ ಸೌಲಭ್ಯಕ್ಕೆ ₹145.84 ಕೋಟಿ ಮೀಸಲಿಡಲಾಗಿದೆ. ಅಮೃತ ಭಾರತ ಯೋಜನೆಯಡಿ 51 ನಿಲ್ದಾಣಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಅಭಿವೃದ್ಧಿ ಕಾರ್ಯ ಈಗಾಗಲೇ ಆರಂಭವಾಗಿವೆ. ರೈಲ್ವೆ ಸಚಿವಾಲಯದ ಅನುಮತಿ ಮೇರೆಗೆ ಬೆಂಗಳೂರು ವಿಭಾಗದ ಗುಬ್ಬಿ ಮತ್ತು ಶ್ರವಣಬೆಳಗೊಳ ನಿಲ್ದಾಣವನ್ನು ಈಚೆಗಷ್ಟೇ ಯೋಜನೆಗೆ ಸೇರಿಸಲಾಗಿದೆ.

ಹೊಸ ಮಾರ್ಗಗಳು:

ಹಾಸನ– ಬೆಂಗಳೂರು (ಶ್ರವಣಬೆಳಗೊಳ ಮಾರ್ಗವಾಗಿ), ಹುಬ್ಬಳ್ಳಿ–ಅಂಕೋಲಾ ಹಾಗೂ ಬೆಳಗಾವಿ–ಧಾರವಾಡ (ಕಿತ್ತೂರು ಮಾರ್ಗವಾಗಿ) ನೂತನ ಮಾರ್ಗ ನಿರ್ಮಾಣಕ್ಕಾಗಿ ತಲಾ ₹20 ಕೋಟಿ, ಗದಗ (ತಳಕಲ್) –ವಾಡಿ ಮಾರ್ಗಕ್ಕಾಗಿ ₹200 ಕೋಟಿ, ತುಮಕೂರು–ದಾವಣಗೆರೆ (ಚಿತ್ರದುರ್ಗ ಮಾರ್ಗವಾಗಿ), ಬಾಗಲಕೋಟೆ–ಕುಡಚಿ, ಗದಗ–ಯಲವಿಗಿ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗಗಳಿಗೆ ತಲಾ (₹150 ಕೋಟಿ), ಕಡೂರು–ಚಿಕ್ಕಮಗಳೂರು–ಹಾಸನ (₹70 ಕೋಟಿ), ತುಮಕೂರು–ರಾಯದುರ್ಗ (ಕಲ್ಯಾಣದುರ್ಗ ಮಾರ್ಗವಾಗಿ) ₹250 ಕೋಟಿ, ಮಾರಿಕುಪ್ಪಮ್–ಕುಪ್ಪಮ್ (₹60 ಕೋಟಿ), ಮಲಗೂರು–ಪಾಲಸಮುದ್ರಮ್ (₹21 ಕೋಟಿ), ಮುನಿರಾಬಾದ್–ಮಹಬೂಬನಗರ (₹100 ಕೋಟಿ) ಮೀಸಲಿಡಲಾಗಿದೆ.

ದ್ವಿಪಥ ಮಾರ್ಗ: ಗದಗ–ಹೊಟಗಿ (₹170 ಕೋಟಿ), ಬೈಯಪ್ಪನಹಳ್ಳಿ–ಹೊಸೂರು ಹಾಗೂ ಬೆಂಗಳೂರು ಕಂಟೋನ್ಮೆಂಟ್–ವೈಟ್‌ಫೀಲ್ಡ್ (ನಾಲ್ಕು ಮಾರ್ಗಕ್ಕಾಗಿ) ತಲಾ (₹200 ಕೋಟಿ), ಹೊಸಪೇಟೆ–ತಿನೈಘಾಟ್–ವಾಸ್ಕೊ ಡ ಗಾಮಾ (₹400 ಕೋಟಿ), ಹುಬ್ಬಳ್ಳಿ–ಚಿಕ್ಕಜಾಜೂರು, ಅರಸೀಕೆರೆ–ತುಮಕೂರು ಹಾಗೂ ಯಲಹಂಕ–ಪೆನುಕೊಂಡ ಮಾರ್ಗಕ್ಕೆ ತಲಾ ₹20 ಕೋಟಿ, ಯಶವಂತಪುರ–ಚನ್ನಸಂದ್ರ ಹಾಗೂ ಪೆನುಕೊಂಡ–ಧರ್ಮಾವರಮ್ ಮಾರ್ಗ ದ್ವಿಪಥಕ್ಕಾಗಿ ₹100 ಕೋಟಿ ಮೀಸಲಿರಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT