ಧಾರವಾಡ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರವು ಮಳೆ ಮುಂದುವರಿದಿದ್ದು, 98 ಮನೆಗಳಿಗೆ ಹಾನಿಯಾಗಿವೆ.

ಏಳು ಮನೆಗಳು ತೀವ್ರ, 91 ಮನೆಗಳು ಭಾಗಶಃ ಹಾನಿಯಾಗಿವೆ. ತಾಲ್ಲೂಕಿನ ಬಾವಿಕಟ್ಟಿ ಗ್ರಾಮದಲ್ಲಿ ಒಂದು ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆಯಿಂದ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿತ್ತು. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಯು ಸಂಜೆ ವೇಳೆ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಮಳೆಯಿಂದ ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದು ನೀರು ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಲ್ಲಿಯೇ ಜನರು ದೇವಸ್ಥಾನಕ್ಕೆ ತೆರಳುವ ದೃಶ್ಯಗಳು ಕಂಡುಬಂದವು.

ಗರಗ ತಡಕೋಡ, ಕೋಟೂರ, ನೀರಲಕಟ್ಟಿ, ಮಾದನಭಾವಿ ತೇಗೂರದಲ್ಲಿ ಅರ್ಧ ತಾಸು ಮಳೆಯಾಗಿದೆ. ಗದ್ದೆಗಳಲ್ಲಿ ನೀರು ತುಂಬಿವೆ. ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.

ಧಾರವಾಡ ಹುಬ್ಬಳ್ಳಿ ಮಾರ್ಗದ ರಸ್ತೆ ಭಾಗದಲ್ಲಿ ತಗ್ಗು ಭಾಗಗಳಲ್ಲಿ ನೀರು ನಿಂತಿತ್ತು. ಮಣ್ಣಿನ ರಸ್ತೆಗಳು ಪೂರ್ಣ ಕೆಸರುಮಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.