ಹುಬ್ಬಳ್ಳಿ: ಧಾರವಾಡ, ಬೆಳಗಾವಿ, ವಿಜಯನಗರ ಜಿಲ್ಲೆಯ ಕೆಲವಡೆ ಮಂಗಳವಾರ ಗುಡುಗು, ಸಿಡಿಲು ಸಮೇತ ಧಾರಾಕಾರ ಮಳೆ ಸುರಿಯಿತು. ಬೆಳಗಾವಿ ನಗರ, ತಾಲ್ಲೂಕಿನ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿಯಿತು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ಮತ್ತು ಗುಡಿಗೇರಿಯಲ್ಲಿ ಮಳೆ ಸುರಿಯಿತು. ಮಳೆ, ಗಾಳಿ ರಭಸಕ್ಕೆ ಕೆಲ ಕಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೂ ಸೋರಿಕೆ ಉಂಟಾಗಿ, ಜಿಲ್ಲಾಧಿಕಾರಿ ಅವರ ಕೊಠಡಿಗೂ ರಾಡಿ ಮಿಶ್ರಿತ ನೀರು ನುಗ್ಗಿತು. ಕಚೇರಿಯ ಸಿಬ್ಬಂದಿ ನೀರು ಹೊರಹಾಕಲು ಶ್ರಮಿಸಿದರು.

ಬೆಳಗಾವಿ ಜಿಲ್ಲೆ ಖಾನಾಪುರ, ಯರಗಟ್ಟಿ, ಸವದತ್ತಿ, ಚಿಕ್ಕೋಡಿ, ಗೋಕಾಕ ಸುತ್ತಮುತ್ತಲೂ ಮಳೆ ಸುರಿಯಿತು.

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮತ್ತು ಹರಪನಹಳ್ಳಿ ತಾಲ್ಲೂಕಿನ ತೆಲಗಿ, ಅರಸೀಕೆರೆ ಹೋಬಳಿಗಳಲ್ಲಿ ಸ್ವಲ್ಪ ಹೊತ್ತು ಬಿರುಸಾಗಿ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.