ಭಾನುವಾರ, ಸೆಪ್ಟೆಂಬರ್ 19, 2021
24 °C

15 ಜನರಿಗೆ ರಾಯಣ್ಣ ಶೌರ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕವು ವಿವಿಧ ಕ್ಷೇತ್ರಗಳ 15 ಜನರನ್ನು ‘ಸಂಗೊಳ್ಳಿ ರಾಯಣ್ಣ ಶೌರ್ಯ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಈಗ ಕೋವಿಡ್‌ ಆತಂಕ ಇರುವ ಕಾರಣ ಆ. 15ರಂದು ಮಧ್ಯಾಹ್ನ 4 ಗಂಟೆಗೆ ಸಾಂಕೇತಿಕವಾಗಿ ರಾಯಣ್ಣ ಜನ್ಮದಿನ ಕಾರ್ಯಕ್ರಮ ನಡೆಸಿ, ಜ. 26ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಾನಂದ ಮುತ್ತಣ್ಣನವರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರದ ಎಲ್ಲ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಿಸಬೇಕು ಎಂದು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು ಸಂತಸದ ವಿಚಾರ. ಇದು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.

ಪಾಲಿಕೆ ಚುನಾವಣೆಯಲ್ಲಿ 68ನೇ ವಾರ್ಡ್‌ನಿಂದ ಆಕಾಂಕ್ಷಿಯಾಗಿದ್ದು, ಟಿಕೆಟ್‌ ನೀಡುವಂತೆ ಪಕ್ಷದ ನಾಯಕರನ್ನು ಕೋರಿದ್ದೇನೆ ಎಂದರು.

ಪ್ರಶಸ್ತಿಗೆ ಆಯ್ಕೆಯಾದವರು: ಮಂಜುನಾಥ ಹಾರೂಗೇರಿ, ಮಂಜುನಾಥ ಚವ್ಹಾಣ (ಸಮಾಜ ಸೇವೆ), ಗುರುರಾಜ ಹೂಗಾರ, ಜಗದೀಶ ಬುರ್ಲಬಡ್ಡಿ, ಸಂತೋಷ ಇಳಿಗೇರ (ಮಾಧ್ಯಮ), ಶರೀಫ್‌ಸಾಬ್‌ ನದಾಫ್‌ (ಸಾರಿಗೆ ಇಲಾಖೆ), ಡಾ. ಸಿದ್ಧಗಂಗಾ, ಡಾ. ಮಲ್ಲಿಕಾರ್ಜುನ ಸ್ವಾಮಿ, ಡಾ. ಕವಿತಾ ಎಸ್‌. ಕೋರೆ (ವೈದ್ಯಕೀಯ), ಮಲ್ಲು ಬೆಳಗಲಿ, ಸುಪ್ರಿತಾ ಬಡಿಗೇರ (ಸಂಗೀತ), ಸಂಜು ಚನ್ನಬಸವ ಅವರಾದಿ, ಸಂಜೀವ ಸಾಹೋಜಿ (ದೇಶದ ಗಡಿಯಲ್ಲಿ ಸೇವೆ), ಅಡಿವೆಪ್ಪ ಬಡಿಗೇರ ಹಾಗೂ ಚನ್ನಪ್ಪ ವಾಲೀಕಾರ (ಪೊಲೀಸ್‌ ಇಲಾಖೆ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.