ಮಂಗಳವಾರ, ನವೆಂಬರ್ 12, 2019
25 °C

ರಮೇಶ್ ಸಾವಿನ ವಿಚಾರ; ಬೇರೆಡೆ ಗಮನ ಸೆಳೆಯುವ ತಂತ್ರ: ಶೆಟ್ಟರ್‌

Published:
Updated:
ಸಚಿವ ಜಗದೀಶ್ ಶೆಟ್ಟರ್‌

ಹುಬ್ಬಳ್ಳಿ: ಕಾಂಗ್ರೆಸ್‌ ಶಾಸಕ ಪರಮೇಶ್ವರ ಅವರ ಆಪ್ತ ಸಹಾಯಕ ಎಂ.ರಮೇಶ್ ಮೃತಪಟ್ಟಿರುವ ಘಟನೆಯನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಐಟಿ ದಾಳಿಯನ್ನು ಬದಿಗೊತ್ತಿ ಇದು ಜನರನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಮೇಶ್‌ ಸಾವಿಗೆ ಕಾರಣ ಏನೆಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ನಿಜಾಂಶ ಎಲ್ಲರಿಗೂ ಗೊತ್ತಾಗಲಿ’ ಎಂದರು.

‘ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಕಾಂಗ್ರೆಸ್‌ ರಾಜಕಾರಣದ ಉದ್ದೇಶಕ್ಕೆ ಟೀಕೆ ಮಾಡುತ್ತಿದೆ. ದಾಳಿ ರಾಜಕೀಯ ಪ್ರೇರಿತವಲ್ಲ; ಇದನ್ನು ಕಾನೂನು ಪ್ರಕಾರ ಎದುರಿಸುತ್ತೇನೆ ಎಂದು ಖುದ್ದು ಪರಮೇಶ್ವರ್ ಅವರೇ ಹೇಳಿದ್ದಾರೆ. ಆದರೂ, ಕಾಂಗ್ರೆಸ್‌ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ವಿಷಯಗಳೂ ಸಿಗುತ್ತಿಲ್ಲ. ಆದ್ದರಿಂದ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ’ ಎಂದು ದೂರಿದರು.

ಪ್ರತಿಕ್ರಿಯಿಸಿ (+)