ಧಾರವಾಡ: ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಂಜುನಾಥ (35) ಎಂಬಾತಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಪೋಕ್ಸೊ ಸೆಷನ್ಸ್ ಕೋರ್ಟ್ ಹತ್ತುವರೆ ವರ್ಷ ಜೈಲು, ₹ 52 ಸಾವಿರ ದಂಡ ವಿಧಿಸಿದೆ.

ನ್ಯಾಯಾಧೀಶ ರಾಕುಮಾರ ಸಿ. ಆದೇಶ ನೀಡಿದ್ದಾರೆ. ಐಪಿಸಿ 376ರಡಿ 10 ವರ್ಷ ಕಠಿಣ ಸಜೆ, ₹ 50 ಸಾವಿರ ದಂಡ ಹಾಗೂ ಐಪಿಸಿ 506ರಡಿ ಆರು ತಿಂಗಳು ಜೈಲು, ₹ 2 ಸಾವಿರ ದಂಡ ವಿಧಿಸಿದ್ಧಾರೆ. ಸಂತ್ರಸ್ತ ಪರಿಹಾರ ಯೋಜನೆ ನಿಧಿಯಿಂದ ₹ 4 ಲಕ್ಷ ಹಾಗೂ ದಂಡದಲ್ಲಿ ₹ 50 ಸಾವಿರವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ: 2021ರಲ್ಲಿ ಪ್ರಕರಣ ನಡೆದಿತ್ತು. ಮಂಜುನಾಥ ಪತ್ನಿ ಮೊದಲ ಹೆರಿಗೆಗೆ ಆಸ್ಪತ್ರೆಗೆ ಹೋಗಿದ್ದರು. ಆಗ ಮಂಜುನಾಥ ಎದುರಿನ ಮನೆಯ ಬಾಲಕಿಯನ್ನು ಅತ್ಯಾಚಾರ ಎಸಗಿದ್ದು, ಅವಳು ಗರ್ಭಿಣಿಯಾಗಿದ್ದಳು ವಿಷಯ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಬಾಲಕಿ ತಾಯಿ ಧಾರವಾಡ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಾ ಯು ಅಂಗಡಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.