ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರ ಮಠಗಳಲ್ಲಿ ಆರಾಧನೆ ಸಂಭ್ರಮ

ಹೂವಿನಿಂದ ಕಂಗೊಳಿಸುತ್ತಿರುವ ವೃಂದಾವನ, ದರ್ಶನಕ್ಕೆ ಭಕ್ತಸಮೂಹ
Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಧಾರವಾಡ: ರಾಘವೇಂದ್ರ ಸ್ವಾಮಿಗಳ 348ನೇಆರಾಧನಾ ಮಹೋತ್ಸವದ ಅಂಗವಾಗಿ ಅವಳಿ ನಗರದವಿವಿಧ ರಾಯರ ಮಠಗಳಲ್ಲಿ ಶುಕ್ರವಾರ ಪೂರ್ವಾರಾಧನೆ ಸಡಗರ ಕಂಡುಬಂತು.

ಎರಡು ಶತಮಾನದ ಇತಿಹಾಸ ಹೊಂದಿರುವ ಹುಬ್ಬಳ್ಳಿಯತೊರವಿಗಲ್ಲಿ ಮಠ, ಭವಾನಿನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠ, ರಾಮಕೃಷ್ಣ ನಗರದ ಭಕ್ತಾದಿಗಳ ಮಠ, ನವನಗರ,ಕುಸುಗಲ್‌ ರಸ್ತೆಯಲ್ಲಿರುವ ಮಠ,ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಮಠ, ಪರಿಮಳ ನಗರದಲ್ಲಿರುವ ಮಠ ಮತ್ತುಶಕ್ತಿ ಕಾಲೊನಿಯ ರಾಯರ ಮಠಗಳಲ್ಲಿ ಬೆಳಿಗ್ಗೆ 5.30ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಧಾರವಾಡದಮಾಳಮಡ್ಡಿ, ಗಾಂಧಿಚೌಕ್ ದೇಸಾಯಿ ಗಲ್ಲಿ, ವಿದ್ಯಾಗಿರಿಯ ಹಾಲಗಣೇಶ ವಿದ್ಯಾಪೀಠ, ಮಹಿಷಿ ರಸ್ತೆಯ ಕೇಳಕರ ಮಾರುತಿ ದೇವಸ್ಥಾನ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ಮಠಗಳಲ್ಲಿನ ವೃಂದಾವನಕ್ಕೆ ಪೂಜೆ ಸಲ್ಲಿಸಲಾಯಿತು. ಹನುಮಂತನಗರದ ಕೃಷ್ಣ, ರಾಘವೇಂದ್ರ, ಮಹಾಗಣಪತಿ ದೇವಸ್ಥಾನದಲ್ಲಿ ಗುರುರಾಯರ ಮಹಾತ್ಮೆ ಕುರಿತು ಪ್ರಧಾನ ಅರ್ಚಕ ಶ್ರೀನಾಥ ಭಟ್ ಉಪನ್ಯಾಸ ನೀಡಿದರು.ಮಠಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಎಲ್ಲ ಮಠಗಳಲ್ಲಿಬೆಳಿಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ರಥೋತ್ಸವ, ಅಷ್ಟೋತ್ತರ ಪಾರಾಯಣ, ಪುಷ್ಪಾಲಂಕಾರ ಮಧ್ಯಾಹ್ನ ಬ್ರಾಹ್ಮಣರ ಪೂಜೆ ಮತ್ತು ಹಸ್ತೋದಕ ಜರುಗಿದವು.ಸಂಜೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾಮಂಗಳಾರತಿ ನಡೆದವು.ಸಂಜೆ ತಾರತಮ್ಯೋಕ್ತ, ಭಜನೆ, ಭಕ್ತಿಗೀತೆ, ಸ್ವಸ್ತಿವಾಚನ, ರಥೋತ್ಸವ, ಡೋಲೋತ್ಸವ ಜರುಗಿದವು.ರಾಯರ ವೃಂದಾವನಗಳನ್ನು ಸುಂದರವಾಗಿ ಹೂ ಮತ್ತು ಹಣ್ಣುಗಳಿಂದಅಲಂಕರಿಸಲಾಗಿತ್ತು. ಭಕ್ತರು ಬೆಳಿಗ್ಗೆಯಿಂದಲೇ ರಾಯರ ದರ್ಶನ ಪಡೆದರು.

‘ರಾಮಕೃಷ್ಣ ನಗರದಲ್ಲಿ ಎಲ್ಲ ಜಾತಿಯಜನರಿಂದ ಹಣ ಸಂಗ್ರಹಿಸಿ ಮಠ ಕಟ್ಟಲಾಗಿದೆ. ಆದ್ದರಿಂದ ಇದು ಭಕ್ತಾಧಿಗಳ ರಾಯರ ಮಠ ಎಂದೇ ಹೆಸರಾಗಿದೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರರಾಧನೆ ಮೂರೂ ದಿನ ಅಷ್ಟೋತ್ತರ, ವಾಯುಸ್ತುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ’ ಎಂದು ಮಠದ ಅಧ್ಯಕ್ಷಶ್ರೀಧರ ರಾಘವೇಂದ್ರ ಪೂಜಾರ ತಿಳಿಸಿದರು. ಈ ಮಠದಲ್ಲಿ ಪ್ರಧಾನ ಅರ್ಚಕಭಂಡಾಚಾರ್ಯ ವ್ಯಾಸಮುದ್ರಿ ಪೂಜಾ ಕೈಂಕರ್ಯನೆರವೇರಿಸಿದರು.

ಧಾರವಾಡದವಿದ್ಯಾಗಿರಿಯಲ್ಲಿರುವ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ, ಪಂಡಿತ್ ಉಜಿರೆ ರಾಮಚಂದ್ರಾಚಾರ್ಯ ಪ್ರವಚನ ನೀಡಿ‘ದಿನದ ಕೆಲವು ಕ್ಷಣಗಳಾದರೂ ಭಗವಂತನ ಸ್ಮರಣೆ, ಧ್ಯಾನ ಮಾಡುವುದರಿಂದ ಆತನ ಕೃಪೆಗೆ ಪಾತ್ರರಾಗುತ್ತೇವೆ. ಇದು ರಾಘವೇಂದ್ರ ವಿಜಯದಲ್ಲಿ ಉಲ್ಲೇಖವಾಗಿದೆ. ಒತ್ತಡದ ಬದುಕಿನಿಂದಯಾರಿಗೂ ಭಗವಂತನ ಸ್ಮರಣೆಗೆ ಸಮಯ ಸಿಗುತ್ತಿಲ್ಲ. ಆದರೆ, ಇದು ಸರಿಯಲ್ಲ. ಸ್ವಲ್ಪ ಸಮಯವಾದರೂ ಭಗವಂತನಿಗಾಗಿಮೀಸಲಿಡಬೇಕು' ಎಂದರು.

ನಂತರ ಬಾಗಲಕೋಟೆಯ ಜಯತೀರ್ಥ ದಾಸಗಾಂವಕರ್‌ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹುಬ್ಬಳ್ಳಿಯ ಭವಾನಿ ನಗರ ಮಠದಲ್ಲಿ ಭಾವದೀಪ ಶಾಲೆಯ ನೂರಾರು ಮಕ್ಕಳು ಮಠಕ್ಕೆ ಬಂದು ಪ್ರಸಾದ ಸೇವಿಸಿದರು. ತೊರವಿಗಲ್ಲಿಯಲ್ಲಿ ಶ್ರೀಹರಿ ಆಚಾರ್ಯ ವಾಳ್ವೇಕರ್‌ ಅವರಿಂದ ರಾಯರ ಗ್ರಂಥಗಳು ಕುರಿತು ಉಪನ್ಯಾಸ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT