ಬುಧವಾರ, ಸೆಪ್ಟೆಂಬರ್ 22, 2021
21 °C

12ರಿಂದ ಹುಬ್ಬಳ್ಳಿ–ಅರಸೀಕೆರೆ ನಡುವೆ ನಿತ್ಯ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅರಸೀಕೆರೆ–ಹುಬ್ಬಳ್ಳಿ ನಡುವೆ ಆ. 12ರಿಂದ ನಿತ್ಯ ಕಾಯ್ದಿರಿಸದ ವಿಶೇಷ ಪ್ಯಾಸೆಂಜರ್‌ ರೈಲಿನ ಸಂಚಾರ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಸೀಕೆರೆಯಿಂದ ಬೆಳಗಿನ ಜಾವ 4.40ಕ್ಕೆ ಹೊರಡಲಿರುವ ರೈಲು ಮಧ್ಯಾಹ್ನ 12.55ಕ್ಕೆ ಹುಬ್ಬಳ್ಳಿಗೆ ಬರಲಿದೆ. ವಾಣಿಜ್ಯ ನಗರಿಯಿಂದ ಮ. 3 ಗಂಟೆಗೆ ಹೊರಟು ರಾತ್ರಿ 10.25ಕ್ಕೆ ಅರಸೀಕೆರೆ ಮುಟ್ಟಲಿದೆ.

ರೈಲು ಬಾಣಾವರ, ದೇವನೂರು, ಬಳ್ಳೇಕೆರೆ ಹಾಲ್ಟ್‌, ಕಡೂರು, ಬೀರೂರು, ನಾಗವಂಗಲ, ಅಜ್ಜಂಪುರ, ಶಿವನಿ, ಹೊಸದುರ್ಗ ರೋಡ್‌, ಅರಬಗಟ್ಟ ಹಾಲ್ಟ್‌, ರಾಮಗಿರಿ, ನುಲೇನೂರು, ಹೊಳಲ್ಕೆರೆ, ಚಿಕ್ಕಜಾಜೂರು, ಸಾಸಲು, ಮಾಯಕೊಂಡ, ಕೊಡಗನೂರು, ಹನುಮನಹಳ್ಳಿ, ತೋಳಹುಣಸೆ, ದಾವಣಗೆರೆ, ಹರಿಹರ, ಚಳಗೇರಿ, ರಾಣಿಬೆನ್ನೂರು, ದೇವರಗುಡ್ಡ, ಬ್ಯಾಡಗಿ, ಹಾವೇರಿ, ಕರಜಗಿ, ಕಳಸೂರು, ಸವಣೂರ, ಯಲವಿಗಿ, ಕಳಸ ಹಾಲ್ಟ್‌, ಗುಡಗೇರಿ, ಸಂಶಿ ಮತ್ತು ಕುಂದಗೋಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು