ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೆಕ್ಕೆ–ಬೇರು’ ಚಿತ್ರಕಲಾ ಶಿಬಿರ ಇಂದು, ನಾಳೆ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಆಯೋಜನೆ
Last Updated 20 ಮಾರ್ಚ್ 2023, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಜಾವಾಣಿ@75 ಅಂಗವಾಗಿ ‘ಪ್ರಜಾವಾಣಿ’– ‘ಡೆಕ್ಕನ್‌ ಹೆರಾಲ್ಡ್‌’, ಅರಣ್ಯ ಇಲಾಖೆ ಮತ್ತು ಧಾರವಾಡದ ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಮಾರ್ಚ್‌ 20 ಮತ್ತು 21ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಉದ್ಯಾನದಲ್ಲಿ ‘ರೆಕ್ಕೆ–ಬೇರು’ ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಕಲಾವಿದ ಎಂ.ಜೆ. ಬಂಗ್ಲೇವಾಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಾಲಭಾವಿ ಸ್ಕೂಲ್ ಆಫ್‌ ಆರ್ಟ್‌ನ ನಿವೃತ್ತ ಪ್ರಾಚಾರ್ಯ ಸುರೇಶ ಹಾಲಭಾವಿ ಇರಲಿದ್ದು, ಟ್ರಸ್ಟ್‌ನ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಲಿದ್ದಾರೆ. ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥೆ ರಶ್ಮಿ ಎಸ್‌. ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವೈ. ನಾಗನಗೌಡ, ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಚ್‌. ಕುರಿಯವರ ಭಾಗವಹಿಸಲಿದ್ದಾರೆ.

ಶಿಬಿರದ ನಿರ್ದೇಶಕರಾಗಿ ಹುಬ್ಬಳ್ಳಿಯ ಆರ್.ಬಿ. ಗರಗ, ಧಾರವಾಡದ ಡಿ.ಎಂ. ಬಡಿಗೇರ, ಎಫ್‌.ವಿ. ಚಿಕ್ಕಮಠ ಕಾರ್ಯನಿರ್ವಹಿಸಲಿದ್ದಾರೆ. ಕಲಾವಿದರಾದ ಹುಬ್ಬಳ್ಳಿಯ ಶಕುಂತಲಾ ವೆರ್ಣೇಕರ, ಕಿರಣ ಶೇರಖಾನೆ, ಧಾರವಾಡದ ಶಿವಕುಮಾರ ಕಂಕಣವಾಡಿ, ಸವಿತಾ ಪಾಟೀಲ, ದೀಪಕ ಬಿ., ಬಸವರಾಜ ಕಲೆಗಾರ ಹಾಗೂ ಯುವಕಲಾವಿದರಾದ ಧಾರವಾಡದ ಧನರಾಜ ನಾಯ್ಕ, ಗಝಲ್‌ ಕಾಮತ್‌, ವಿವೇಕಾನಂದ ಬಡಿಗೇರ, ನಿಂಗಪ್ಪ ದೊಡ್ಡಸುಂಕದ, ಹುಬ್ಬಳ್ಳಿಯ ಸುಮಂತ ಹೆಗಡೆ, ಶ್ರೀಲಕ್ಷ್ಮಿ ಬೆಳವಟಗಿ, ವಿಜಯ ಧೋಂಗಡಿ, ಗಣೇಶ ಸಾಬೋಜಿ, ಸುಮಾ ಶೇಠ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT