ಬುಧವಾರ, ನವೆಂಬರ್ 13, 2019
25 °C

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೆ ಆಗ್ರಹ

Published:
Updated:
Prajavani

ಹುಬ್ಬಳ್ಳಿ: ಖಾಸಗಿ ಶಾಲಾ, ಕಾಲೇಜುಗಳಿಗೆ ಅನುದಾನ ನೀಡುವುದು, ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌)ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧಾರವಾಡ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಶನಿವಾರ ನಗರದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

1995ರ ನಂತರ ಆರಂಭವಾದ ಶಾಲಾ, ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಬೇಕು. ಎನ್‌ಪಿಸಿ ರದ್ದು ಮಾಡಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಕಾಲ್ಪನಿಕ ವೇತನ ಬಡ್ತಿ ಯಥಾವತ್ತಾಗಿ ಜಾರಿಗೆ ತರಬೇಕು. 2006ರ ನಂತರ ಅನುದಾನಕ್ಕೆ ಒಳಪಟ್ಟು ಹಾಗೂ ನೇಮಕಗೊಂಡ ನೌಕರರಿಗೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಖಾಲಿ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ, ಸಭೆ ಕರೆದು ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಜಗದೀಶ ಕಲ್ಯಾಣಶೆಟ್ಟರ, ಬಿ.ಕೆ. ಮಳಗಿ, ಜಗದೀಶ ದ್ಯಾವಪ್ಪನವರ, ಬಿ.ಕೆ. ಮಳಗಿ, ಪರಮೇಶ್ವರ ಬೈನವರ, ಎಸ್‌.ವಿ.ಪಟ್ಟಣಶೆಟ್ಟಿ, ಎ.ಎ.ಮುಲ್ಲಾ, ಅಬ್ದುಲ್‌ ಖಾದರ್‌ ಮೆಣಸಗಿ, ಎಸ್‌.ಆರ್‌. ಹಡಗಲಿ, ಡಾ.ಸರ್ವಮಂಗಲಾ ಕುದರಿ, ಎನ್‌.ಎ. ಬದ್ದಿ, ಎಂ.ಎಚ್‌. ಜಂಗಳಿ, ಎಸ್.ಬಿ.ಹಿರೇಮಠ, ಎಂ.ಬಿ.ಕಂಬಾರ, ಎ.ಆರ್‌.ಮಾನೆ, ಸಿದ್ದು ಬಸ್ತಿ ಇದ್ದರು.

ಪ್ರತಿಕ್ರಿಯಿಸಿ (+)