ಭಾನುವಾರ, ಆಗಸ್ಟ್ 25, 2019
23 °C

ಬಿಡಾಡಿ ದನಗಳ ಸೆರೆ ಪುನರಾರಂಭ

Published:
Updated:
Prajavani

ಹುಬ್ಬಳ್ಳಿ: ಮಹಾನಗರ ಪಾಲಿಕೆ ವತಿಯಿಂದ ಬಿಡಾಡಿ ದನ–ಕರುಗಳನ್ನು ಸೆರೆ ಹಿಡಿದು ಬೇರೆಡೆ ಸಾಗಿಸುತ್ತಿದ್ದ ಕಾರ್ಯ ಶನಿವಾರ ಪುನರಾರಂಭವಾಗಿದೆ.

ಪಾಲಿಕೆ ವತಿಯಿಂದ ಅನುಮತಿ ಪಡೆದಿರುವ ಕಾಶಪ್ಪ ಬಿಜವಾಡ ಅವರು ರೈಲ್ವೆ ನಿಲ್ದಾಣ, ಚನ್ನಮ್ಮ ವೃತ್ತದಲ್ಲಿ ದನಗಳನ್ನು ಸೆರೆಹಿಡಿದರು. ಕಾಶಪ್ಪ ದಿನಕ್ಕೆ ಹತ್ತು ಬಿಡಾಡಿ ದನಗಳನ್ನು ಸೆರೆ ಹಿಡಿದು ಅದರಗುಂಚಿಯಲ್ಲಿರುವ ಗೋ ಶಾಲೆಯಲ್ಲಿ ರಕ್ಷಣೆ ಮಾಡುತ್ತಿದ್ದಾರೆ. ಅವುಗಳ ಮಾಲೀಕರು ಬಂದರೆ ಪ್ರತಿ ದನಕ್ಕೆ ₹ 4,000 ಪಡೆದು ಬಿಡುಗಡೆ ಮಾಡುತ್ತಾರೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಸೆರೆ ಹಿಡಿದ ದನ–ಕರುಗಳನ್ನು ಉಚಿತವಾಗಿ ಬಿಡುವಂತೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ನನಗೆ ನಷ್ಟವಾಗುತ್ತಿದೆ ಎಂದು ಕಶ್ಯಪ್‌ ಹೇಳಿದ್ದರು. ಈ ಕಾರಣಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.

‘ಬಿಡಾಡಿ ದನಗಳನ್ನು ಸೆರೆ ಹಿಡಿಯುವ ಕಾರ್ಯ ಆರಂಭವಾಗಿದೆ. ಇವುಗಳ ತೊಂದರೆಗೆ ಸಂಬಂಧಿಸಿದ ದೂರುಗಳಿದ್ದರೆ ಕಾಶಪ್ಪ ಅವರ ಮೊ. 9845601877 ಸಂಪರ್ಕಿಸಬೇಕು’ ಎಂದು ಪಾಲಿಕೆ ಆರೋಗ್ಯಧಿಕಾರಿ ತಿಳಿಸಿದ್ದಾರೆ.

Post Comments (+)