ಗುರುವಾರ , ಜೂನ್ 24, 2021
21 °C

ಆಸ್ತಿ ತೆರಿಗೆ ಹೆಚ್ಚಳ ರದ್ದತಿಗೆ ಆಗ್ರಹಿಸಿ ಆಪ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಳ ಹಿಂತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಮತ್ತು ಧಾರವಾಡ ಜಿಲ್ಲಾ ಸಚಿವರಿಗೆ ಆಸ್ತಿ ಕರ ಹಿಂಪಡೆಯುವಂತೆ ಜನಸಾಮಾನ್ಯರು, ಸಂಘಟನೆಗಳು ಹಾಗೂ ಎಎಪಿ ಅನೇಕ ಮನವಿಗಳನ್ನು ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ದೂರಿದರು.

ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕರ ಹೆಚ್ಚಿಸುವುದು ಸರಿಯಲ್ಲ ಎಂದು ಟೀಕಿಸಿದರು.

ಸಂತೋಷ ನರಗುಂದ, ವಿಕಾಸ ಸೊಪ್ಪಿನ, ಪ್ರತಿಭಾ, ಶಶಿಕುಮಾರ ಸುಳ್ಳದ, ವಿವೇಕಾನಂದ ಸಾಲಿನ್ಸ್, ಶಿವಲಿಂಗಪ್ಪ ಜಡೆಣ್ಣವರ, ವಿಜಯ ಸಾಯಿ, ತ್ಯಾಗರಾಜ ಅಲ್ಲಂಪಟ್ಟಿ, ಅನಂತಕುಮಾರ ಭಾರತೀಯ, ಲಕ್ಷ್ಮಣ ರಾಠೋಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು