ಶನಿವಾರ, ಅಕ್ಟೋಬರ್ 19, 2019
27 °C
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್; ಸಂಚಾರ ಮಾರ್ಗ ಬದಲು

ಆರ್‌ಎಸ್‌ಎಸ್‌ ಪಥ ಸಂಚಲನ

Published:
Updated:

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ನಗರದಲ್ಲಿ ಭಾನುವಾರ ಪಥ ಸಂಚಲನ ಹಮ್ಮಿಕೊಂಡಿದೆ. ನೆಹರು ಮೈದಾನದಿಂದ ಆರಂಭಗೊಳ್ಳಲಿರುವ ಪಥ ಸಂಚಲನ, ಪ್ರಮುಖ ರಸ್ತೆಗಳಲ್ಲಿ ಸಾಗಿ ಮರಳಿ ಮೈದಾನ ತಲುಪಲಿದೆ.

ಪಥ ಸಂಚಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಣಧಾರಿಗಳು ಭಾಗವಹಿಸುವುದರಿಂದ, ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಗರದ ಪ್ರಮುಖ ರಸ್ತೆಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಗದಗ ರಸ್ತೆ ಕಡೆಯಿಂದ ಬರುವ ವಾಹನಗಳು ರಸ್ತೆಯ ಕೆಳ ಸೇತುವೆಯಿಂದ ಕೆ.ಎಚ್. ಪಾಟೀಲ ರಸ್ತೆ ಮೂಲಕ, ರೈಲ್ವೆ ಆಫೀಸರ್ಸ್‌ ಗಾಲ್ಫ್‌ ಮೈದಾನದ ಮುಂದಿನ ರಸ್ತೆ, ದೇಸಾಯಿ ಸರ್ಕಲ್, ಹಳೇ ಕೋರ್ಟ್‌ ಸರ್ಕಲ್, ವಾಸನ್ ಐ ಕೇರ್, ಸರ್ಕೀಟ್ ಹೌಸ್, ಬಾಳಿಗಾ ಕ್ರಾಸ್, ಬೆಂಬಳಗಿ ಕ್ರಾಸ್, ಕಾಟನ್ ಮಾರ್ಕೆಟ್ ವಿ.ಐ.ಪಿ. ರಸ್ತೆ ಮೂಲಕ ಉತ್ತರ ಸಂಚಾರ ಪೊಲೀಸ್ ಠಾಣೆ, ಶಾನಭಾಗ ಸರ್ಕಲ್ ಮುಖಾಂತರ ಹೊಸೂರು ವೃತ್ತಕ್ಕೆ ಬಂದು, ಅಲ್ಲಿಂದ ಗೋಕುಲ ರಸ್ತೆ ಮೂಲಕ ಬೆಳಗಾವಿ, ಬೆಂಗಳೂರು, ಕಾರವಾರ ಹಾಗೂ ಧಾರವಾಡ ಕಡೆಗೆ ಹೋಗಬೇಕು.

ನವಲಗುಂದ ರಸ್ತೆ ಕಡೆಯಿಂದ ಬರುವ ಖಾಸಗಿ ವಾಹನಗಳು ಮತ್ತು ಬಸ್ಸುಗಳು ಕೂಡ ಕೇಶ್ವಾಪೂರ ವೃತ್ತದಿಂದ ದೇಸಾಯಿ ಸರ್ಕಲ್‌ಗೆ ಬಂದು ಮೇಲಿನ ಮಾರ್ಗದಲ್ಲಿ ಸಂಚರಿಸಬೇಕು.

ಸ್ಟೇಷನ್ ರಸ್ತೆ ಕಡೆಯಿಂದ ಬರುವ ವಾಹನಗಳು ಪಿಂಟೂ ಸರ್ಕಲ್ ಮಾರ್ಗವಾಗಿ, ದೇಸಾಯಿ ಸರ್ಕಲ್, ವಿವೇಕಾನಂದ ಆಸ್ಪತ್ರೆ ಕ್ರಾಸ್, ಸರ್ಕೀಟ್ ಹೌಸ್, ಬಾಳಿಗಾ ಕ್ರಾಸ್, ಬೆಂಬಳಗಿ ಕ್ರಾಸ್, ಕಾಟನ್ ಮಾರ್ಕೆಟ್ ವಿ.ಐ.ಪಿ. ರಸ್ತೆ ಮೂಲಕ ಉತ್ತರ ಸಂಚಾರ ಪೊಲೀಸ್ ಠಾಣೆಯ ಮುಂದೆ ಅವರಿಗೆ ಅನುಕೂಲವಾಗುವ ರಸ್ತೆಗಳಲ್ಲಿ ಸಂಚರಿಸಬಹುದು.

ಅಯೋಧ್ಯೆ ಹೊಟೇಲ್‍ ಹಾಗೂ ನೀಲಿಜನ್ ರಸ್ತೆ ಕಡೆಯಿಂದ ಬರುವ ವಾಹನಗಳು ಕೋರ್ಟ್ ಸರ್ಕಲ್, ದೇಸಾಯಿ ಸರ್ಕಲ್ ಮೇಲ್ಸೇತುವೆ ಮಾರ್ಗವಾಗಿ ನವಲಗುಂದ ಕಡೆಗೆ ಹೋಗಬೇಕು. ಅದೇ ರೀತಿ ಗದಗ ಕಡೆಗೆ ಹೋಗುವ ವಾಹನಗಳು ಗಾಲ್ಫ್‌ ಮೈದಾನ ಕ್ರಾಸ್, ಶೃಂಗಾರ ಹೊಟೇಲ್ ಕ್ರಾಸ್ ಕ್ರಾಸ್ ಮಾರ್ಗವಾಗಿ ತೆರಳಬೇಕು.

Post Comments (+)