ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ರೈಲುಗಳ ಸೇವೆ ವಿಸ್ತರಣೆ

Last Updated 7 ಮಾರ್ಚ್ 2023, 15:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಿಂದ ರಾಮೇಶ್ವರಂಗೆ ಹೋಗುವ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ 07355) ಸೇವೆಯನ್ನು ಏಪ್ರಿಲ್‌ 1ರಿಂದ ಜೂನ್‌ 24ರವರೆಗೆ, ರಾಮೇಶ್ವರಂ- ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (07356) ಸೇವೆಯನ್ನು ಏ.2ರಿಂದ ಜೂನ್‌ 25ರವರೆಗೆ ವಿಸ್ತರಿಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (06545) ಜೂನ್‌ 30ರವರೆಗೆ, ವಿಜಯಪುರ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (06546 ) ಜುಲೈ 1ರವರೆಗೆ, ಕೆ.ಎಸ್‌.ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ವಿಶೇಷ ರೈಲು (06243) ಸೆ.13ರವರೆಗೆ, ಹೊಸಪೇಟೆ–ಕೆ.ಎಸ್‌.ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು (06244) ಸೆ.14ರವರೆಗೆ, ಯಶವಂತಪುರ-ಮುರುಡೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06563) ಏ.1ರಿಂದ ಜೂನ್ 24ರವರೆಗೆ, ಮುರುಡೇಶ್ವರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06564) ಏ. 2ರಿಂದ ಜೂನ್ 25ರವರೆಗೆ, ವಿಜಯಪುರ-ಮಂಗಳೂರು ಜಂಕ್ಷನ್‌ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07377) ಜೂನ್‌ 30ರವರೆಗೆ, ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07378) ಜುಲೈ 1ರವರೆಗೆ ಸಂಚರಿಸಲಿವೆ. ರೈಲುಗಳ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಚಾರ ಮೊಟುಕು: ಹುಬ್ಬಳ್ಳಿ–ವಿಜಯವಾಡ ಡೈಲಿ ಎಕ್ಸ್‌ಪ್ರೆಸ್‌ ರೈಲು (17329) ಮಾರ್ಚ್‌ 8,9ರಂದು ವಿಜಯವಾಡಕ್ಕೆ ಹೋಗದೆ, ಗುಂಟೂರಿನಲ್ಲೇ ಸಂಚಾರ ಸ್ಥಗಿತಗೊಳಿಸಲಿದೆ. ಮಾರ್ಚ್‌ 9 ಹಾಗೂ 10ರಂದು ವಿಜಯವಾಡ–ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌ (17330) ಗುಂಟೂರಿನಿಂದ ಸಂಚಾರ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT