ಗುರುವಾರ , ಡಿಸೆಂಬರ್ 5, 2019
25 °C
ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್‌ ಟೂರ್ನಿ

ಬ್ಯಾಡ್ಮಿಂಟನ್‌ ಟೂರ್ನಿ: ಸಂಭ್ರಮ್, ಖುಷಿ ಪವಾರ್‌ ಚಾಂಪಿಯನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸಂಭ್ರಮ್‌ ಕೋಳಿವಾಡ ಹಾಗೂ ಖುಷಿ ಪವಾರ್ ಅವರು ನಗರದ ನಾರಾಯಣ ಪೇಟ್ಕರ್‌ ಬ್ಯಾಡ್ಮಿಂಟನ್‌ ಅಕಾಡೆಮಿ ಇತ್ತೀಚಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಆಕಾಡೆಮಿಯಲ್ಲಿ ನಡೆದ ಬಾಲಕರ 10 ವರ್ಷದ ಒಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ಲೇಯಿಸ್ಟೊ ಕ್ಲಬ್‌ನ ಸಂಭ್ರಮ್–ಎಂಎಂಬಿ ಅಕಾಡೆಮಿಯ ಎನ್‌. ಕಾರ್ತಿಕ್‌ ಅವರನ್ನು ಮಣಿಸಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಖುಷಿ–ಎಚ್‌. ತನುಶ್ರೀ ವಿರುದ್ಧ ಗೆಲುವು ಸಾಧಿಸಿದರು.

13 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಧಾರವಾಡದ ಅನ್ಮೋಲ ಪ್ರಭು–ಶಿವಮೊಗ್ಗದ ಆರ್‌.ಕೆ. ನಕುಲ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಕೆ. ನತಾಶಾ–ಶಿರಸಿಯ ಭಾಗ್ಯಲಕ್ಷ್ಮಿ ವಿರುದ್ಧವೂ, 15 ವರ್ಷದ ಒಳಗಿನವರ ಬಾಲಕರ ವಿಭಾಗದಲ್ಲಿ ಎಲ್‌ಬಿ ಅಕಾಡೆಮಿಯ ಎಂ. ಕಾರ್ತಿಕ–ಎಂಎಂಬಿ ಅಕಾಡೆಮಿಯ ಮಾರ್ಟಿನ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಶಿರಸಿಯ ಎನ್‌ಎಂಬಿ ಅಕಾಡೆಮಿಯ ಪ್ರೇರಣಾ ಶೇಠ್– ಇದೇ ಕ್ಲಬ್‌ನ ಮೇದಿನಿ ಹಂದ್ರಾಳ ವಿರುದ್ಧವೂ ಗೆಲುವು ಪಡೆದು ಪ್ರಶಸ್ತಿಯ ಒಡೆಯರಾದರು.

15 ವರ್ಷದ ಒಳಗಿನವರ ಬಾಲಕರ ಡಬಲ್ಸ್‌ನ ಫೈನಲ್‌ನಲ್ಲಿ ಶಿರಸಿಯ ಅಖಿಲ್ ಹೆಗ್ಡೆ–ಸನತ್‌ ಜೋಡಿ ಎಎಸ್‌ ಅಕಾಡೆಮಿಯ ಈಶನ್ ಭಟ್‌–ಕಾರ್ತಿಕ್‌ ಎದುರು ಜಯ ಸಾಧಿಸಿತು.

17 ವರ್ಷದ ಒಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಶಿರಸಿಯ ಪ್ರಜ್ವಲ್‌ ಶೇಠ್–ಅವಿನಾಶ ಭಟ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಹುಬ್ಬಳ್ಳಿಯ ಗ್ಲೋರಿಯಾ ವಿ. ಅಠವಾಲೆ–ಪ್ರೇರಣಾ ಶೇಠ್‌ ವಿರುದ್ಧವೂ ಜಯದು ನಗು ಬೀರಿದರು.

ಇದೇ ವಯೋಮಾನದ ಬಾಲಕರ ಡಬಲ್ಸ್‌ನಲ್ಲಿ ಹುಬ್ಬಳ್ಳಿಯ ಅವಿನಾಶ ಭಟ್‌– ಎಸ್‌.ಎಂ. ತುಷಾರ ಜೋಡಿ ದಾಂಡೇಲಿಯ ನಿಹಾಲ ಕಾಮತ್‌–ಎಂ. ತರುಣ್‌ ಎದುರು ಜಯ ಸಾಧಿಸಿ ಚಾಂಪಿಯನ್‌ ಆದರು.

19 ವರ್ಷದ ಒಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಶಿರಸಿಯ ಎನ್‌ಎಂಬಿ ಅಕಾಡೆಮಿಯ ಪ್ರಜ್ವಲ್‌ ತಮ್ಮದೇ ಅಕಾಡೆಮಿಯ ಅಖಿಲ್ ನಾಟೇಕರ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಗಳಿಸಿದರು.

ಪ್ರತಿಕ್ರಿಯಿಸಿ (+)