ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಮೆರವಣಿಗೆ

7

ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಮೆರವಣಿಗೆ

Published:
Updated:
Deccan Herald

ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣನ 224ನೇ ಜಯಂತ್ಯುವದ ಅಂಗವಾಗಿ ಹುಬ್ಬಳ್ಳಿಯಲ್ಲಿ ಸೋಮವಾರ ಅದ್ಧೂರಿ ಮೆರವಣಿಗೆ ನಡೆಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಈ ಮೆರವಣಿಗೆ ಆಯೋಜಿಸಿತ್ತು. ನಗರದ ದುರ್ಗದ ಬೈಲ್‌ನಿಂದ ಆರಂಭವಾದ ರಾಯಣ್ಣನ ಭಾವಚಿತ್ರದ ಮೆರವಣಿಗೆಗೆ ಸಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಮಹಿಳಾ ಡೊಳ್ಳಿನ ಕಲಾ ತಂಡಗಳು ಸೇರಿದಂತೆ, ಜಾನಪದ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆ ರಾಯಣ್ಣನ ಪ್ರತಿಮೆ ಎದುರು ಮುಕ್ತಾಯವಾಯಿತು.

ಆ ನಂತರ ರಾಯಣ್ಣನ ಪ್ರತಿಮೆಗೆ ದೊಡ್ಡ ಗಾತ್ರದ ಹೂವಿನ ಹಾರ ಹಾಕಲಾಯಿತು. ಮುಖಂಡರಾದ ಪರಶುರಾಮ ದಿವಾನದ್, ಜಗದೀಶ ಕಂಬಳಿ, ರವಿ ನಡೂರ, ವಿಜಯ್ ಕಿನ್ಸೆ, ಮುಕ್ತರಾಜ್ ಕುರಿ, ಬಾಲಕಂಚಿ, ಅಶೋಕ್ ಸೂರ್ಯ ಬಾನ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !