ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಯಿ ಗಂಧರ್ವ ಪುಣ್ಯಸ್ಮರಣೆ ಸೆ. 30ರಂದು

Last Updated 28 ಸೆಪ್ಟೆಂಬರ್ 2021, 16:36 IST
ಅಕ್ಷರ ಗಾತ್ರ

ಕುಂದಗೋಳ: ಪಟ್ಟಣದಲ್ಲಿ ಸೆ. 30ರಂದು ಸಂಗೀತ ಪಿತಾಮಹ ಸವಾಯಿ ಗಂಧರ್ವರ 69ನೇ ಪುಣ್ಯಸ್ಮರಣೆ ಅಂಗವಾಗಿ ಸರಳವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವಸ್ಥ ಸಮಿತಿ ಅಧ್ಯಕ್ಷ ಅರವಿಂದ ಕಟಗಿ ತಿಳಿಸಿದರು.

ಪಟ್ಟಣದ ಹರಭಟ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೋವಿಡ್ ಕಾರಣದಿಂದಾಗಿ ಹಿಂದಿನ ಎರಡು ವರ್ಷಗಳಿಂದ ಅಹೋರಾತ್ರಿ ಸಂಗೀತ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಾರಿಯೂ 40 ಜನರನ್ನಷ್ಟೇ ಸೇರಿಸಿ ಕಾರ್ಯಕ್ರಮ ಮಾಡಲಾಗುವುದು’ ಎಂದರು.

ಅಂದು ಬೆಳಿಗ್ಗೆ 10 ಗಂಟೆಗೆ ಹರಭಟ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಪತ್ರಕರ್ತ ಮೋಹನ ಹೆಗಡೆ ಉದ್ಘಾಟಿಸುವರು.

ಶಾಸಕಿ ಕುಸುಮಾವತಿ ಶಿವಳ್ಳಿ, ಸಂಗೀತಗಾರರಾದ ಡಾ. ಸುಲಭಾದತ್ ನೀರಲಗಿ, ವೈಷ್ಣವಿ ತಲಕಾಡ, ವೀಣಾ ಹಾನಗಲ್, ಅಶೋಕ ನಾಡಗೇರ, ಪರಶುರಾಮ ಭಜಂತ್ರಿ, ಮಧುಕೇಶ್ವರ ಕೋಟಿ, ಕೃಷ್ಣಕುಮಾರ ಕುಲಕರ್ಣಿ, ಅನಂತ ಪವಣಸ್ಕರ, ನವೀನ ಕುಲಕರ್ಣಿ (ತಬಲಾ), ಪ್ರಭಾಕರ ಪಟವಾರಿ (ಹಾರ್ಮೊನಿಯಂ) ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರವಿಂದ ಕಟಗಿ ವಹಿಸುವರು.

ಸಮಿತಿ ಪದಾಧಿಕಾರಿಗಳಾದ ಟಿ.ಎಸ್.ಗೌಡಪ್ಪನವರ, ಜಿತೇಂದ್ರ ಕುಲಕರ್ಣಿ, ರಾಮಣ್ಣ ಬ್ಯಾಹಟ್ಟಿ, ಎ.ಕೆ.ಕುಲಕರ್ಣಿ, ಈ.ಎಂ.ನಾವಳ್ಳಿ, ಧಾರವಾಡ ಶೆಟ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT