ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವರ್ಷ ಜೈಲು, ದಂಡ

Last Updated 22 ಡಿಸೆಂಬರ್ 2021, 4:28 IST
ಅಕ್ಷರ ಗಾತ್ರ

ಅಳ್ನಾವರ: ಸಮೀಪದ ಕೋಗಿಲಗೇರಿ ಗ್ರಾಮದಲ್ಲಿ ಭರತೇಶ ವರ್ಧಮಾನ ಪಾಟೀಲ ಹಾಗೂ ಮಡಿವಾಳಿ ರುದ್ದಪ್ಪ ಕರಿಯವರ ಮಧ್ಯೆ ಹೊಲಕ್ಕೆ ಹೋಗುವ ದಾರಿ ಬಗ್ಗೆ ಇದ್ದ ನ್ಯಾಯವನ್ನು ವಿಚಾರಣೆ ಮಾಡಿದ ನ್ಯಾಯಾಲಯ ಮಡಿವಾಳಿ ಕರಿಯರವರ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಅಪರಾಧಿಗೆ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ ₹3,800 ದಂಡ ವಿಧಿಸಿದೆ.

ಕೋಗಿಲಗೇರಿ ಗ್ರಾಮದ ಸರ್ವೆ ನಂಬರ 95ರಲ್ಲಿ ಒಂದು ಎಕರೆ, ಐದು ಗುಂಟೆ ಹೊಲಕ್ಕೆ ಹೋಗುವ ಜಾಗೆ ಬಗ್ಗೆ ತಕರಾರು ನಡೆದಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಮಡಿವಾಳಿ ಕರಿಯವರ ಜಮೀನು ಆಕ್ರಮಣ ಮಾಡಿಕೊಂಡಿದ್ದ. ಇದನ್ನು ಪ್ರಶ್ನಿಸಿದ್ದ ಭರತೇಶ ಪಾಟೀಲ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದನು.

ಈ ಕುರಿತು 2019ರ ಡಿಸೆಂಬರ್‌ನಲ್ಲಿ ಅಳ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್‌ಐ ದೇವಾನಂದ ತನಿಖೆ ಮಾಡಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಧಾರವಾಡದ 4ನೇ ಅಧಿಕ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಂ. ಪಂಚಾಕ್ಷರಿ ಈ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಶಾಂತ ಎಸ್. ತೋರಗಲ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT