ಸೋಮವಾರ, ಆಗಸ್ಟ್ 26, 2019
21 °C

ಮನೆ ಹಾನಿ: ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ

Published:
Updated:
Prajavani

ಹುಬ್ಬಳ್ಳಿ: ಎರಡು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಹಾನಿಗೊಂಡ ಮನೆಗಳ ಮಾಲೀಕರಿಗೆ, ಶಾಸಕ ಜಗದೀಶ ಶೆಟ್ಟರ್ ಅವರು ಭಾನುವಾರ ಪರಿಹಾರದ ಧನದ ಚೆಕ್‌ ವಿತರಿಸಿದರು.

ಬೈರಿದೇವರಕೊಪ್ಪ, ಉಣಕಲ್, ರಾಮನಗರ, ಬೆಂಗೇರಿ, ನಾಗಶಟ್ಟಿಕೊಪ್ಪ, ಗಿರಣಿಚಾಳ, ಕೇಶ್ವಾಪುರದ 160ಕ್ಕೂ ಹೆಚ್ಚು ಹಾನಿಗೊಂಡ ಮನೆಗಳ ಮಾಲೀಕರಿಗೆ ಒಟ್ಟು ₹18.58 ಲಕ್ಷ ಪರಿಹಾರ ಧನ ಚೆಕ್ ವಿತರಿಸಲಾಯಿತು.

Post Comments (+)