ಶನಿವಾರ, ಮೇ 21, 2022
22 °C

ತುಮಕೂರಿನ ಶಿವಕುಮಾರ ಸ್ವಾಮೀಜಿಯ 115ನೇ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಮಷ್ಠಿ ಕಲ್ಯಾಣವನ್ನೇ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು’ ಎಂದು ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಕಲ್ಲೂರ ಮತ್ತು ಜವಳಿ ಗಾರ್ಡನ್ ನಿವಾಸಿಗಳ ಸಂಘ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಸ್ವಾಮೀಜಿ, ಲಕ್ಷಾಂತರ ಮಕ್ಕಳಿಗೆ ತಾಯಿ ಕರುಣೆ ಮತ್ತು ಪ್ರೀತಿಯನ್ನು ಧಾರೆಯೆರೆದರು. ಅಕ್ಷರದ ಜೊತೆ‌ಗೆ ಅನ್ನ ದಾಸೋಹ ಮಾಡಿದರು’ ಎಂದರು. ಸಂಘದ ಅಧ್ಯಕ್ಷ ಆರ್.ಸಿ. ಹಲಗತ್ತಿ ಹಾಗೂ ನಿವೃತ್ತ ಗ್ರಂಥಪಾಲಕ ಡಾ.ಬಿ.ಎಸ್. ಮಾಳವಾಡ ಮಾತನಾದರು.

ಪ್ರೊ.ವಿ.ಬಿ. ಮಾಗನೂರ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ ನಿರೂಪಣೆ ಮಾಡಿದರು.   ಮಾಧುರಿ ದೇಶಪಾಂಡೆ ವಂದಿಸಿದರು. ದಾಕ್ಷಾಯಿಣಿ ಕೋಳಿವಾಡ ವಚನಗಳನ್ನು ಹಾಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಹ ಕಾರ್ಯದರ್ಶಿ ಶಂಕರ ಕೋಳಿವಾಡ, ಸಿದ್ಧಲಿಂಗೇಶ್ವರ ವಾಲಿ, ಎಂ.ಎ. ಹಿರೇಮಠ, ಈಶ್ವರ ಹಂದಿಗೋಳ, ಎಸ್.ಬಿ. ಹೊಂಬಳ, ಅಶೋಕ ತಾಳಿಕೋಟಿ, ಶಂಬುಲಿಂಗ ಬಡಿಗೇರ, ಎನ್.ಬಿ. ಬೆಳ್ಳಿಗಟ್ಟಿ, ಸುಷ್ಮಾ ವಾಲಿ, ಸುರೇಶ ಚವ್ಹಾಣ, ಸಿ.ಜಿ. ಶೆಟ್ಟರ, ರಾಜೇಶ್ವರಿ ತಾಳಿಕೋಟಿ, ಅನುಸೂಯಮ್ಮ, ನೀಲಾಂಬಿಕಾ ಶಿವಮೂರ್ತಿ, ಸವಿತಾ ಗೊವೇಶ್ವರಿ, ಸವಿತಾ ಬಗಲಿ, ಶೋಭಾ ಬಡಿಗೇರ, ನಂದಿನಿ ಕೋಟಿ, ಶೀಲಾ ಕೋಟಿ, ಎಸ್.ಬಿ. ಹೊಂಬಳ, ಕೆ. ಶಿಲ್ಪಾ ಗಿರೀಶ, ಎಸ್.ಐ. ಕತ್ತಿಶೆಟ್ಟಿ, ಆನಂದ ಘಟಪನದಿ, ಅನಂತ ಕುಲಕರ್ಣಿ, ರವೀಂದ್ರ ಎಂ.ಜಿ, ಡಾ. ಬಸವಕುಮಾರ ತಲವಾಯಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.