ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ| ಶಿವರಾತ್ರಿ: ಸಂಗೀತೋತ್ಸವ, ಪ್ರಶಸ್ತಿ ಪ್ರದಾನ

ಸಂಗೀತ ಸಾಧಕರು, ಪೋಷಕರಿಗೆ ಸಾಧಕ ಶಿವ ಪ್ರಶಸ್ತಿ
Last Updated 17 ಫೆಬ್ರುವರಿ 2023, 6:41 IST
ಅಕ್ಷರ ಗಾತ್ರ

ಧಾರವಾಡ: ನಗರದ ಮಂಗಳವಾರಪೇಟೆಯಲ್ಲಿರುವ ಮುದಿಮಾರುತಿ ದೇವಸ್ಥಾನದಲ್ಲಿ ಫೆ.18ರಂದು ಮಹಾಶಿವರಾತ್ರಿ ಅಂಗವಾಗಿ ಅಹೋರಾತ್ರಿ ಸಂಗೀತೋತ್ಸವಕ್ಕೆ 47ರ ಸಂಭ್ರಮ, ಸಂಗೀತಗಾರರ ಕಛೇರಿ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಲಾವಿದ ವೀರಣ್ಣ ಪತ್ತಾರ ಕುಟುಂಬದವರು ಮಹಾಶಿವರಾತ್ರಿಯಂದು ಅಹೋರಾತ್ರಿ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. 18ರಂದು ಸಂಜೆ 6.45ಕ್ಕೆ ಆರಂಭವಾಗುವ ಕಾರ್ಯಕ್ರಮ 19ರಂದು ಬೆಳಿಗ್ಗೆ 7 ಗಂಟೆಯವರೆಗೆ ನಡೆಯಲಿದೆ. 12 ಗಂಟೆಗಳ ನಿರಂತರ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ-ಕಿರಿಯ ಕಲಾವಿದರ ಸಮಾಗಮವಾಗಲಿದೆ.

ನಾದಶಿವ ಸಂಗೀತ ವಿದ್ಯಾಲಯ, ಗುರುರಾಜ ಭಜನಾ ಮಂಡಳಿ ಹಾಗೂ ಓಂಕಾರ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿ ಸಂಗೀತ, ಪ್ರಗತಿ, ರೇವತಿ ಅನಿಲಕುಮಾರ ಮತ್ತು ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ಡಾ. ಗುರುಬಸವ ಮಹಾಮನೆ ಮತ್ತು ಶಿಷ್ಯ ವೃಂದದಿಂದ ವಾಯೋಲಿನ್ ವಾದನ, ಸಾತ್ವಿಕ ಗು. ಮಹಾಮನೆ, ಅಥರ್ವ ಘಂಟೆಣ್ಣವರ, ಅಭಯ ಜೋಶಿ, ಡಾ. ಶ್ರೀಹರಿ ದಿಗ್ಗಾವಿ ಮತ್ತು ಶಿಷ್ಯ ವೃಂದದಿಂದ ತಬಲಾ ವಾದನ, ಅಥರ್ವ ಘಂಟೆಣ್ಣವರ, ರಯೀ ಗಲಗಲಿ, ಸಿದ್ಧಾರ್ಥ ಹುಂಬಿ, ಆನಂದ ಕುಲಕರ್ಣಿ, ಅಮೋದಿನಿ ಮಹಾಲೆ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿದೆ.

ಶ್ರೀಧರ ಭಜಂತ್ರಿ ಅವರ ಶಹನಾಯಿ, ಪಂ. ಜಯತೀರ್ಥ ಮೇವುಂಡಿ, ಅನುಪಮಾ ಭಟ್, ಪಂ. ಸತೀಶ ಭಟ್ ಹಾಗೂ ಪಂ. ಕುಮಾರ ಮರಡೂರ ಅವರಿಂದ ಗಾಯನ ಕಛೇರಿ ನಡೆಯಲಿದೆ. ಇವರಿಗೆ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಡಾ. ಶ್ರೀಹರಿ ದಿಗ್ಗಾವಿ, ವಿಜಯಕುಮಾರ ಸುತಾರ, ತುಕಾರಾಂ ಮಡಿವಾಳ, ರಾಹುಲ್ ನಾಯಕ, ದಾಮೋದರ ಪಾಮಡಿ ಹಾಗೂ ಹಾರ್ಮೋನಿಯಂನಲ್ಲಿ ಕೆ.ಜೆ.ಪಾಟೀಲ, ಭರತ್ ಹೆಗಡೆ, ಬಸವರಾಜ ಹಿರೇಮಠ, ವಿನೋದ ಪಾಟೀಲ, ಪ್ರಮೋದ ಹೆಬ್ಬಳ್ಳಿ, ಸೋಹಿಲ್ ಸಯ್ಯದ್ ಹಾಗೂ ತಾಳವಾದ್ಯದಲ್ಲಿ ಸುಧೀಂದ್ರಾಚಾರ್ ಸಿದ್ದಾಪುರ ಸಾಥ್ ನೀಡಲಿದ್ದಾರೆ.

‘ಸಾಧಕ ಶಿವ ಪ್ರಶಸ್ತಿಯನ್ನು ಪಂ. ಕೃಷ್ಣರಾವಬುವಾ ಇನಾಮದಾರ, ಪಂ. ಜಯತೀರ್ಥ ಮೇವುಂಡಿ, ಪಂ. ಕುಮಾರ ಮರಡೂರ, ಪಂ. ಸತೀಶ ಭಟ್ ಮಾಳಕೊಪ್ಪ ಹಾಗೂ ಕಲಾಪೋಷಕ ಸಾಧಕ ಶಿವ ಪ್ರಶಸ್ತಿಯನ್ನು ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಯೋಜಕ ಪ್ರಕಾಶ ಬಾಳಿಕಾಯಿ ಮತ್ತು ಸಾಧಕ ಶಿವ ಸಮ್ಮಾನವನ್ನು ಶಿರಸಿಯ ಭರತ್ ಹೆಗಡೆ, ಯಲ್ಲಾಪುರದ ಅನುಪಮಾ ಭಟ್ ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ಸಮಿತಿಯ ಸಂಚಾಲಕ ವೀರಣ್ಣ ಪತ್ತಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT