ಸಂಶಿ (ಗುಡಗೇರಿ): ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಗುರುದೇವ ಬ್ರಹ್ಮಾನಂದ ಶಿವಯೋಗಿಗಳ 50ನೇ ಹಾಗೂ ಗುರುದೇವ ಸಿದ್ಧೇಶ್ವರ ಮಹಾಸ್ವಾಮಿಗಳ 20ನೇ ಪುಣ್ಯಾರಾಧನೆ ಮಹೋತ್ಸವ ಶುಕ್ರವಾರ ಭಕ್ತಿ ಭಾವದಿಂದ ಜರುಗಿತು.

ಗುರುಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಬ್ರಹ್ಮಾನಂದ ಗುರುದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಖಂಡ ಶಿವನಾಮ ಭಜನೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಸ್ಥಳೀಯ ವಿರಕ್ತಮಠದಿಂದ ಶ್ರೀ ಕರಿಸಿದ್ಧೇಶ್ವರ ಡೊಳ್ಳಿನ ಮೇಳ ಹಾಗೂ ಶ್ರೀ ನಾಗೇಶ್ವರ ಭಜನಾ ಮಂಡಳ, ಕುಂಭ, ಆರತಿ ಹಾಗೂ ವಿವಿಧ ಮಂಗಲ ವಾದ್ಯಗಳೊಂದಿಗೆ ಗುರುದೇವ ಬ್ರಹ್ಮಾನಂದ ಶಿವಯೋಗಿಗಳು ಹಾಗೂ ಗುರುದೇವ ಸಿದ್ಧೇಶ್ವರ ಮಹಾಸ್ವಾಮಿಗಳ ಚಿತ್ರಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬ್ರಹ್ಮಾನಂದ ಆಶ್ರಮ ತಲುಪಿತು.

ವಿರಕ್ತಮಠದ ಚನ್ನಬಸವದೇವರು, ಸಂಗಪ್ಪ ಉಪಾಸಿ, ಶಿವಾನಂದ ಬಡ್ನಿ, ಶಿವಾನಂದ ಪೂಜಾರ, ಹಾಲಪ್ಪ ತಡಾಳ, ಗಿರೀಶ ಪಾಟೀಲ, ಸುರೇಶ ಬೇಟದೂರ, ಶಿವಯೋಗಿಗೌಡ ಪಾಟೀಲ, ಈರಣ್ಣ ಕಮ್ಮಾರ, ಶಿವನಗೌಡ ದ್ಯಾವನಗೌಡ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-24-1864594597

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.