ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷ: ಹುಬ್ಬಳ್ಳಿಯಲ್ಲಿ ಶೋಭಾಯಾತ್ರೆ ಅ.22ಕ್ಕೆ

7

ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷ: ಹುಬ್ಬಳ್ಳಿಯಲ್ಲಿ ಶೋಭಾಯಾತ್ರೆ ಅ.22ಕ್ಕೆ

Published:
Updated:

ಹುಬ್ಬಳ್ಳಿ: ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ರಾಜ್ಯದಾದ್ಯಂತ  ಹಮ್ಮಿಕೊಂಡಿರುವ ಮತ್ತೊಮ್ಮೆ ದಿಗ್ವಿಜಯ ರಥಾಯಾತ್ರೆ ಅ.22ಕ್ಕೆ ಹುಬ್ಬಳ್ಳಿಗೆ ಬರಲಿದೆ. ಅದರಂಗವಾಗಿ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಗೇಡ್‌ ಜಿಲ್ಲಾ ಸಂಚಾಲಕ ಗುರು ಬನ್ನಿಕೊಪ್ಪ ಅವರು, ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ನಡೆಯುವ ಅ.22 ರಂದು ಸಂಜೆ 6ಕ್ಕೆ ಅರವಿಂದ ನಗರದ ವಿವೇಕಾನಂದ ಶಾಲೆ ಆವರಣದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು.

ಹುಬ್ಬಳ್ಳಿ ರಾಮೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ರಘುವೀರಾನಂದ ಸ್ವಾಮೀಜಿ, ಶ್ರೀಮಾತಾ ಆಶ್ರಮದ ತೇಜೊಮಯಿ ಮಾತಾಜಿ ಸಾನ್ನಿಧ್ಯ ವಹಿಸಲಿದ್ದು, ಕನಕದಾಸ ಶಿಕ್ಷಣ ಸಮಿತಿ ಚೇರಮನ್‌ ರವಿ ದಂಡಿನ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಿಗೇಡ್‌ ಮಾರ್ಗದರ್ಶಕ ಚಕ್ರವೆರ್ತಿ ಸೂಲಿಬೆಲೆ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಶೋಭಾಯಾತ್ರೆಗೆ ರಘುವೀರಾನಂದ ಸ್ವಾಮೀಜಿ ಚಾಲನೆ ನೀಡಲಿದ್ದು, ರವಿ ದಂಡಿನ, ಭವರಲಾಲ ಆರ್ಯ, ಶಾಂತಣ್ಣ ಕಡಿವಾಲ, ಸಂದೀಪ ಬೂದಿಹಾಳ, ಅನಿಲಕುಮಾರ ಚೌಗಲೆ ಭಾಗವಹಿಸಲಿದ್ದಾರೆ ಎಂದರು.

ಶೋಭಾಯಾತ್ರೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆ.12 ರಂದು ಮಧ್ಯಾಹ್ನ 1ಕ್ಕೆ ವಿದ್ಯಾನಗರದ ಕನಕದಾಸ ಶಿಕ್ಷಣ ಸಂಂಸ್ಥೆಯಲ್ಲಿ ವಿವೇಕ ಪ್ರಬಂಧ, ವಿವೇಕ ಚಿತ್ತಾರ, ವಿವೇಕ ನುಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಪಮೇಯರ್‌ ಮೇನಕಾ ಹುರಳಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಅ.14 ರಂದು ಸಂಜೆ 4 ಗಂಟೆಗೆ ಅರವಿಂದ ನಗರದ ವಿವೇಕಾನಂದ ಶಾಲೆಯಲ್ಲಿ ವಿವೇಕ ಪತಂಗ ಕಾರ್ಯಕ್ರಮ ನಡೆಯಲಿದ್ದು, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ. ಅ.21 ರಂದು ಬೆಳಿಗ್ಗೆ 6ಕ್ಕೆ ಭವರಲಾಲ ಆರ್ಯ ಅವರು, ವಿವೇಕ ನಮನಕ್ಕೆ ಚಾಲನೆ ನೀಡಲಿದ್ದಾರೆ. 7.30ಕ್ಕೆ ಸೈಕಲ್‌ ಜಾಥಾಕ್ಕೆ ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ಚಾಲನೆ ನೀಡಲಿದ್ದಾರೆ ಎಂದರು.

ಮಂಜುನಾಥ ಹೆಗ್ಗೇರಿ, ನಾಗನಗೌಡ ಪಾಟೀಲ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !