ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢಮಠ: ರಾಜ್ಯಮಟ್ಟದ ಭಜನಾ ಸ್ಪರ್ಧೆ 25ರಿಂದ

Last Updated 9 ಮಾರ್ಚ್ 2020, 12:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಆರನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಮಾ.25ರಿಂದ 30ರ ವರೆಗೆ ಏರ್ಪಡಿಸಲಾಗಿದೆ ಎಂದು ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ತಿಳಿಸಿದರು.

ಭಜನಾ ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ 300ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸಲು ಇಚ್ಛಿಸುವ ತಂಡದವರು ಮಾ.20ರೊಳಗಾಗಿ ಶ್ರೀಮಠದ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಹುಮಾನ

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹90 ಸಾವಿರ, ದ್ವಿತೀಯ ₹70 ಸಾವಿರ, ತೃತೀಯ ₹ 60 ಸಾವಿರ ನೀಡಲಾಗುವುದು ಹಾಗೂ 10 ತಂಡಗಳಿಗೆ ತಲಾ ₹ 8 ಸಾವಿರ ಸಮಧಾನಕರ ಬಹುಮಾನ ನೀಡಲಾಗುವುದು. 16 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ತಲಾ ಒಂದು ತಂಡಕ್ಕೆ ₹9 ಸಾವಿರ, ಮಹಿಳಾ ಭಜನಾ ತಂಡವೊಂದಕ್ಕೆ ₹ 9 ಸಾವಿರ ಪುರಸ್ಕಾರ ನೀಡಲಾಗುವುದು ಎಂದರು.

ಉತ್ತರ ಹಾಡುಗಾರ, ಉತ್ತಮ ಹಾರ್ಮೊನಿಯಂ ವಾದಕ, ಉತ್ತಮ ತಬಲಾ ವಾದಕ, ಉತ್ತಮ ತಾಳ ವಾದಕ ಮತ್ತು ಉತ್ತಮ ಧಮಡಿ ವಾದಕರಿಗೆ ತಲಾ ₹ 4 ಸಾವಿರ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸ್ಪರ್ಧೆ ನಿಯಮಗಳು

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಭಜನಾ ಪದಗಳನ್ನು ಹಾಡುವ ಅವಕಾಶವಿದೆ. ಮೂರು ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು ಹಾಗೂ ಮೂರನೇ ತಂಡವನ್ನು ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯದಲ್ಲಿ ಯಾವುದಾದರೊಂದು ಹಾಡಬಹುದು ಎಂದು ಹೇಳಿದರು.

ಮಾಹಿತಿಗಾಗಿ 9620693060/9880169881 ಸಂಪರ್ಕಿಸಬಹುದು ಎಂದು ತಿಳಿಸಿದರು.

ಉದ್ಘಾಟನೆ

ಮಾ.25ರಂದು ಬೆಳಿಗ್ಗೆ 10.30ಕ್ಕೆ ಮಠದ ಆಡಳಿತಾಧಿಕಾರಿ, ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಈಶಪ್ಪ ಭೂತೆ ಭಜನಾ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಎಂದರು.

ಶ್ರೀಮಠದ ಅಧ್ಯಕ್ಷ ದೇವೇಂದ್ರಪ್ಪ ಮಾಳಗಿ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ, ಜಿ.ಎಸ್.ನಾಯಕ್, ಜಗದೀಶ ಮಗಜಿಕೊಂಡಿ, ವೀರಣ್ಣ ತುಪ್ಪದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT