ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸದ್ಗುರು ಸಿದ್ದಾರೂಢರ ಸಂದೇಶ ಮುಕ್ತಿಗೆ ಸಾಧನ’

Published 13 ಆಗಸ್ಟ್ 2024, 15:49 IST
Last Updated 13 ಆಗಸ್ಟ್ 2024, 15:49 IST
ಅಕ್ಷರ ಗಾತ್ರ

ಅಳ್ನಾವರ: ನಾಡಿನ ಸಾಧು, ಸಂತರು, ಅವತಾರಿ ಪುರುಷರು ಸಮಾಜದ ಒಳಿತಿಗೆ ಉತ್ತಮ ಮೌಲ್ಯ ಬಿತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಸದ್ಗುರುನಾಥ ಸಿದ್ದಾರೂಢ ಸ್ವಾಮೀಜಿ ಅಗ್ರ ಗಣ್ಯರು. ಅವರ ಬದುಕಿನ ಮರ್ಮ ತಿಳಿದುಕೊಳ್ಳಿ ಎಂದು ಧಾರವಾಡದ ಅಧ್ಯಾತ್ಮ ಚಿಂತಕ ಶ್ರೀಶೈಲ ಸಾಣಿಕೊಪ್ಪ ಹೇಳಿದರು.

ಶ್ರಾವಣ ಮಾಸದ ಪ್ರಯುಕ್ತ ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಗುರು ಸಿದ್ದಾರೂಢರ ಮಹಿಮೆ ಪ್ರವಚನ ಮಾಲಿಕೆಯಲ್ಲಿ ಬಾನುವಾರ ರಾತ್ರಿ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗರಗದ ಮಡಿವಾಳೇಶ್ವರ, ನವಲಗುಂದ ನಾಗಲಿಂಗಜ್ಜ ಮುಂತಾದವರ ನಡೆ, ನುಡಿ, ಬದುಕು ಹಾಗೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

ಪೂರ್ಣಿಮಾ ಮುತ್ನಾಳ್ ಸಂಗಡಿಗರು ಭಕ್ತಿ ಗೀತೆ ಹಾಡಿದರು. ಶ್ರೀಗುರು ಸಿದ್ದಾರೂಢರ ಮಹಿಮೆ ಕುರಿತು ಸ್ಥಳೀಯ ಶೇಖಯ್ಯ ಹಿರೇಮಠ ಅವರ ಪ್ರವಚನ ಮಾಲಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ನಂತರ ಗಣ್ಯರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ಸಂಕಲ್ಪ ಸುಣಗಾರ ಕುಟುಂಬ ವರ್ಗದವರಿಂದ ಅಭೀಷೇಕ, ಪ್ರಸಾದ ಸೇವೆ ಜರುಗಿತು. ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಎಸ್.ಡಿ.ದೇವಾಗಾವಿಮಠ, ವೀರಭದ್ರಗೌಡ ಪಾಟೀಲ, ರುದ್ರಪ್ಪ ಹಂಚಿನಮನಿ, ಕಮ್ಮಾರ, ರಾಜು ಬೆಂಡಿಗೇರಿ, ರಾಜಶೇಖರ ಕೌಜಲಗಿ, ರಾಜೇಶ್ವರಿ ಹಿರೇಮಠ, ಉಮೇಶ ದೊಡ್ಡಮನಿ, ಶಂಕರಪ್ಪ ನರಗುಂದ, ಜಯಶ್ರೀ ಸೊಪ್ಪಿ, ಲೀಲಾವತಿ ಹಸಬಿಮಠ, ಕಸ್ತೂರಿ ತೆಂಗಿನಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT